alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆ ದೃಶ್ಯ

bus cctv

ಹುಬ್ಬಳ್ಳಿ: ಐಷಾರಾಮಿ ಬಸ್ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಹತ್ತಿ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಮಹಮ್ಮದ್ ಶಫಿ ಬಂಧಿತ ಆರೋಪಿ.

ಹುಬ್ಬಳ್ಳಿಯಲ್ಲಿ ವಾಸವಾಗಿರುವ ಮಹಮ್ಮದ್ ಶಫಿ ಪೇಂಟರ್ ಕೆಲಸ ಮಾಡುತ್ತಿದ್ದ. ರಾತ್ರಿಯಾಗುತ್ತಲೇ, ಪ್ರಯಾಣಿಕನ ಸೋಗಿನಲ್ಲಿ ಲಗೇಜ್ ಇಟ್ಟುಕೊಂಡು ಐಷಾರಾಮಿ ಬಸ್ ಏರುತ್ತಿದ್ದ. ಮಧ್ಯ ರಾತ್ರಿ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲಾ ನಿದ್ದೆ ಹೋದ ನಂತರ, ಕೈಗೆ ಸಿಕ್ಕ ಬ್ಯಾಗ್ ತೆಗೆದುಕೊಂಡು ಬಸ್ ನಿಂದ ಇಳಿದು ಹೋಗುತ್ತಿದ್ದ. ಹೀಗೆ ಕಳೆದ ಮಾರ್ಚ್ 21 ರ ರಾತ್ರಿ ಹುಬ್ಬಳ್ಳಿಯಿಂದ ಮುಂಬೈಗೆ ಹೊರಟಿದ್ದ ಐಷಾರಾಮಿ ಬಸ್ ಏರಿದ್ದಾನೆ ಮಹಮ್ಮದ್ ಶಫಿ.

ಬಸ್ ಕಿತ್ತೂರು ದಾಟುತ್ತಿದ್ದಂತೆ ನಾನು ಹಿಂದೆಯೇ ಇಳಿಯಬೇಕಿತ್ತು ಎಂದು ಅವಸರ ಮಾಡುತ್ತಾ, ತನ್ನ ಲಗೇಜ್ ತೆಗೆದುಕೊಳ್ಳುವಂತೆ ನಟಿಸಿ ಬೇರೆಯವರ ಲಗೇಜ್ ತೆಗೆದುಕೊಂಡು ಇಳಿದಿದ್ದಾನೆ. ಅವನು ತೆಗದುಕೊಂಡು ಹೋಗಿದ್ದ ಬ್ಯಾಗ್ ನಲ್ಲಿ ಸಂದೀಪ್ ಎಂಬ ಚಿನ್ನದ ವ್ಯಾಪಾರಿಗೆ ಸೇರಿದ 38 ಲಕ್ಷ ರೂ. ಹಣ ಇತ್ತು.

ಸಂದೀಪ್ ಹುಬ್ಬಳ್ಳಿ ಉಪನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಸ್ ನಲ್ಲಿದ್ದ ಸಿಸಿ ಟಿವಿಯ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿ ಮಹಮ್ಮದ್ ಶಫಿಯನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...