alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು: ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಬಾರಿ ಮೇ 2 ರಿಂದಲೇ ತರಗತಿಗಳು ಆರಂಭವಾಗಿವೆ. ಕೆ.ಎಸ್.ಆರ್.ಟಿ.ಸಿ. ಜೂನ್ ನಿಂದ ಪಾಸ್ ವಿತರಿಸಲಿದೆ. ಕಾಲೇಜಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾದ ಹಿನ್ನಲೆಯಲ್ಲಿ ಈ ತಿಂಗಳಿಂದಲೇ ಉಚಿತವಾಗಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಬಸ್ ಪಾಸ್ ವಿತರಿಸುವುದು ವಿಳಂಬವಾಗಲಿರುವ ಹಿನ್ನಲೆಯಲ್ಲಿ 2017 -18 ನೇ ಸಾಲಿನ ಪ್ರಥಮ ಪಿ.ಯು.ಸಿ.ಯಲ್ಲಿ ಪಡೆದ ಪಾಸ್ ಗಳನ್ನೇ ಬಳಸಿಕೊಂಡು ಪ್ರಯಾಣಿಸಲು ತಿಳಿಸಲಾಗಿದೆ.

ಈ ಬಾರಿ ಬೇಗನೆ ತರಗತಿ ಆರಂಭವಾದ ಹಿನ್ನಲೆಯಲ್ಲಿ ಹಳೆಯ ಪಾಸ್ ಗಳಲ್ಲಿಯೇ ಪ್ರಯಾಣಿಸಬಹುದಾಗಿದೆ. ಜೂನ್ ನಲ್ಲಿ ಹೊಸ ಪಾಸ್ ವಿತರಿಸಲಾಗುವುದು. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ವಿತರಿಸುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಆದರೆ, ಇನ್ನೂ ಆದೇಶ ಹೊರಡಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...