alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಟಿ ಬಸ್ ನೌಕರರು ಮಾಡಿದ್ದಾರೆ ಸಾರ್ಥಕ ಕಾರ್ಯ

give-moneyಉಡುಪಿ ಸಿಟಿ ಬಸ್ ನೌಕರರು ಸಾರ್ಥಕ ಕಾರ್ಯ ಮಾಡಿದ್ದಾರೆ. ಆನಾರೋಗ್ಯದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಚಿಕಿತ್ಸೆಗೆ ಹಣ ಸಂಗ್ರಹಿಸಿ ಅದನ್ನು ಆಕೆಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಆನಾರೋಗ್ಯದಿಂದ ಬಳಲುತ್ತಿದ್ದ ಗೀತಾ ಎಂಬ 19 ವರ್ಷದ ವಿದ್ಯಾರ್ಥಿನಿಯ ಚಿಕಿತ್ಸೆಗೆ ಆಕೆಯ ಸ್ನೇಹಿತರು ಹಣ ಸಂಗ್ರಹಿಸಿ ನೀಡುತ್ತಿರುವ ವಿಚಾರ ಉಡುಪಿ ಸಿಟಿ ಬಸ್ ನೌಕರರಿಗೆ ತಿಳಿದುಬಂದಿದೆ. ಈ ಪ್ರಯತ್ನದಲ್ಲಿ ತಾವೂ ಕೈಜೋಡಿಸಲು ಬಸ್ ಚಾಲಕ, ನಿರ್ವಾಹಕ ಹಾಗೂ ಕ್ಲೀನರ್ ಗಳು ತೀರ್ಮಾನಿಸಿದ್ದಾರೆ.

ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಹಣ ನೀಡಿದ್ದಲ್ಲದೇ ಸಿಟಿ ಬಸ್ ಗಳಲ್ಲಿ ಹಾಗೂ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಪೆಟ್ಟಿಗೆಯಿಟ್ಟು ಹಣ ಸಂಗ್ರಹಿಸಿದ್ದಾರೆ. ಒಟ್ಟು 1.15 ಲಕ್ಷ ರೂ. ಸಂಗ್ರಹವಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈಯವರ ಮೂಲಕ ವಿದ್ಯಾರ್ಥಿನಿಗೆ ಕೊಡಿಸಿ ಸಾರ್ಥಕತೆ ಮೆರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...