alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಿಲುಗಡೆ ವಿಚಾರದಲ್ಲಿ ನಡೆಯಿತು ಜಟಾಪಟಿ

representational-imageನಿಲುಗಡೆ ಇಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿ ಹಾಗೂ ಕಂಡಕ್ಟರ್ ನಡುವೆ ಜಟಾಪಟಿ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೆ.ಆರ್. ಪುರಂ ನ ಸೇತುವೆ ಮೇಲೆ ಬೆಂಗಳೂರು- ಚಿಂತಾಮಣಿ ಮಾರ್ಗದ ಬಸ್ ನ್ನು ಕಂಡಕ್ಟರ್ ವಿಶ್ವನಾಥ್ ರೆಡ್ಡಿ ನಿಲುಗಡೆ ಮಾಡಿದ್ದಾರೆ. ಇದಕ್ಕೆ ಇದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹೋಂ ಗಾರ್ಡ್ ರಮ್ಯಾ ಆಕ್ಷೇಪಿಸಿದ್ದಾರಲ್ಲದೇ ಇದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಎಂದು ಹೇಳಿದರೆನ್ನಲಾಗಿದೆ.

ಬಸ್ ಏಕೆ ನಿಲ್ಲಿಸಬಾರದೆಂದು ಕಂಡಕ್ಟರ್ ಪ್ರಶ್ನಿಸಿದ್ದಲ್ಲದೇ ರಮ್ಯಾರವರನ್ನು ಏಕವಚನದಲ್ಲಿ ಕರೆದಿದ್ದಕ್ಕೆ ಅವರು ಆಕ್ರೋಶಗೊಂಡಿದ್ದು, ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಬಳಿಕ ಬಸ್ ನ್ನು ಪ್ರಯಾಣಿಕರ ಸಮೇತ ಠಾಣೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಇಬ್ಬರ ವಿಚಾರಣೆಯನ್ನೂ ನಡೆಸಿದ ಪೊಲೀಸರು, ಇತರೆ ಪ್ರಯಾಣಿಕರಿಗೆ ತೊಂದರೆಯುಂಟು ಮಾಡಿದ್ದಕ್ಕೆ ಇಬ್ಬರಿಂದಲೂ ಕ್ಷಮಾಪಣೆ ಪತ್ರ ಬರೆಸಿಕೊಂಡು ಕಳುಹಿಸಿಕೊಟ್ಟರೆಂದು ತಿಳಿದುಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...