alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿದ್ದ ಬಸ್ ಗೆ ಬೆಂಕಿ, ಮಗು ಸಜೀವ ದಹನ

burn

ಬೀದರ್: ಚಲಿಸುತ್ತಿದ್ದ ಬಸ್ ಗೆ ಬೆಂಕಿ ತಗುಲಿ, ಮಗು ಸಜೀವ ದಹನವಾದ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲ್ಲೂಕಿನಲ್ಲಿ ಬೆಳಗಿನ ಜಾವ ನಡೆದಿದೆ.

3 ವರ್ಷದ ವಿಹಾನ್ ಮೃತಪಟ್ಟ ಮಗು. ವೋಲ್ವೋ ಬಸ್ ನಲ್ಲಿ 38 ಮಂದಿ ಪ್ರವಾಸಕ್ಕೆ ಬಂದಿದ್ದು, ಶಿರಡಿಯಿಂದ ಹೈದರಾಬಾದ್ ಗೆ ತೆರಳುತ್ತಿದ್ದರು. ಹುಮ್ನಾಬಾದ್ ಸಮೀಪದಲ್ಲಿ ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್ ನಿಂದ ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಚಾಲಕ, ಕೂಡಲೇ ಪ್ರಯಾಣಿಕರೆಲ್ಲರಿಗೆ ಇಳಿಯುವಂತೆ ಸೂಚಿಸಿದ್ದು, ಮಗುವಿನ ಪೋಷಕರು ಇಳಿಯುವ ಧಾವಂತದಲ್ಲಿ ಮಗುವನ್ನು ಅಲ್ಲೇ ಬಿಟ್ಟಿದ್ದಾರೆ.

ಬಸ್ ನಲ್ಲಿ ಮಲಗಿದ್ದ ಮಗು ಅಲ್ಲೇ ಸಜೀವ ದಹನವಾಗಿದೆ. ಬಸ್ ನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಹುಮ್ನಾಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...