alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಲ್ಲೇ ಯುವತಿಗೆ ಇರಿದ ಕಿರಾತಕ

ಬೆಂಗಳೂರು: ಬಸ್ ನೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳಾ ಟೆಕ್ಕಿಗೆ ಚಾಕುವಿನಿಂದ ಇರಿದ ಘಟನೆ ಆನೇಕಲ್ ಸಮೀಪದ ಕೂಡ್ಲುಗೇಟ್ ನಲ್ಲಿ ನಡೆದಿದೆ.

ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿರುವ ಸ್ನೇಹಾ ಅವರು ಕಂಪನಿ ಬಸ್ ನಲ್ಲಿ ತೆರಳುವಾಗ ಏಕಾಏಕಿ ಬಸ್ ಗೆ ನುಗ್ಗಿದ ಯುವಕ ಚಾಕುವಿನಿಂದ ಕೈಗೆ ಇರಿದಿದ್ದಾನೆ.

ಬಳಿಕ ಬಸ್ ಇಳಿದು ಪರಾರಿಯಾಗಲೆತ್ನಿಸಿದ್ದಾನೆ. ಬೇರೆ ಬಸ್ ಹತ್ತಿ ತೆರಳುತ್ತಿದ್ದ ದುಷ್ಕರ್ಮಿಯನ್ನು ಅಲ್ಲಿದ್ದವರು ಹಿಡಿದು ಥಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗಾಯಗೊಂಡಿರುವ ಸ್ನೇಹಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...