alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಚಾಯಿತಿ ಎಲೆಕ್ಷನ್ ನಲ್ಲಿ ‘ಬುಲೆಟ್ ರಾಣಿ’ ಕಮಾಲ್

bullet rani

ಅಹಮದಾಬಾದ್ ನಲ್ಲಿ ಇತ್ತೀಚೆಗಷ್ಟೆ, ಮದುವೆ ಮನೆಗೆ ಮದುವಣಗಿತ್ತಿ ಬುಲೆಟ್ ಏರಿ ಬಂದಿದ್ದು, ಸಖತ್ ಸುದ್ದಿಯಾಗಿತ್ತು. ಇದೀಗ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಬುಲೆಟ್ ಏರಿ ಬಂದು ಪ್ರಚಾರ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಮಂಡ್ಯ ಜಿಲ್ಲೆಯ ಹೊಳಲು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಪ್ರಭಾ ಎಂಬುವವರು ಬುಲೆಟ್ ಸೌಂಡ್ ನೊಂದಿಗೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಅವರು ಮುಂದಾಗಿದ್ದು, ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿಯುವ ಸಿದ್ಧತೆ ನಡೆಸಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಬುಲೆಟ್ ಏರಿ ಹಳ್ಳಿಗಳನ್ನು ಸುತ್ತಿ ಪ್ರಚಾರ ನಡೆಸಿದ್ದಾರೆ. ಅವರ ಪ್ರಚಾರಕ್ಕೆ ಮತದಾರರು ಹೇಗೆ ರೆಸ್ಪಾನ್ಸ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಭಾ ಅವರಿಗೆ ಮೊದಲಿನಿಂದಲೂ ಸ್ಕೂಟರ್ ಚಾಲನೆ ಮಾಡಲು ಬರುತ್ತದೆ. ಇತ್ತಿಚೆಗಷ್ಟೇ ಬುಲೆಟ್ ಕಲಿತಿದ್ದು, ಇದೀಗ ತಮ್ಮ ಚುನಾವಣಾ ಪ್ರಚಾರಕ್ಕೆ ಅದನ್ನೇ ಬಳಸುತ್ತಿದ್ದಾರೆ. ಆ ಮೂಲಕ ವಿಭಿನ್ನ ಪ್ರಚಾರ ಮಾಡಿ ಗಮನ ಸೆಳೆದಿದ್ದಾರೆ. ಈ ಕ್ಷೇತ್ರದ ಮತದಾರರು ತಮ್ಮನ್ನು ಚುನಾಯಿಸುವ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...