alex Certify
ಕನ್ನಡ ದುನಿಯಾ       Mobile App
       

Kannada Duniya

ಬರದ ಹಿನ್ನಲೆಯಲ್ಲಿ ಭಾರೀ ಭೋಜನಕ್ಕೆ ಬ್ರೇಕ್

Siddaramaiahಬಜೆಟ್ ಅಧಿವೇಶನ ನಡೆಯುವಾಗ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ದಿನಕೊಬ್ಬ ಸಚಿವರು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವ ಸಂಪ್ರದಾಯವಿದ್ದು, ಈ ಬಾರಿ ಅದಕ್ಕೆ ಬ್ರೇಕ್ ಬಿದ್ದಿದೆ.

ಸೋಮವಾರದ ಭೋಜನ ಕೂಟ ಬೆಂಗಳೂರು ನಗರಾಭಿವೃಧ್ಧಿ ಸಚಿವರಾದ ಕೆ.ಜೆ. ಜಾರ್ಜ್ ರವರಿಂದ ಏರ್ಪಾಡಾಗಿತ್ತು. ಆದರೆ ರಾಜ್ಯದಲ್ಲಿ ವ್ಯಾಪಕ ಬರ ಪರಿಸ್ಥಿತಿ ಇರುವುದರಿಂದ  ಅಧಿವೇಶನದ ಸಮಯದಲ್ಲಿ ಸಚಿವರುಗಳು ಭೋಜನ ಕೂಟ  ಏರ್ಪಡಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೂಚಿಸಿದ್ದಾರೆ.

ಆದ್ದರಿಂದ  ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದು ಏರ್ಪಡಿಸಬೇಕಿದ್ದ ಭೋಜನ ಕೂಟವನ್ನೂ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...