alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶೇಷ ಯಜ್ಞ-ಯಾಗಗಳ ಮೊರೆಹೋದ ಬಿ.ಎಸ್.ವೈ.

ಅಧಿಕಾರದ ಗದ್ದುಗೆ ಹಿಡಿಯುವ ಸಲುವಾಗಿ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೇವರನಾಡು ಕೇರಳದಲ್ಲಿ ಯಜ್ಞ-ಯಾಗ, ಹೋಮ-ಹವನಗಳನ್ನು ಮಾಡಿಸಿದ್ದಾರೆ. ರಾಜಕೀಯ ಏಳಿಗೆ ಹಾಗೂ ಶತ್ರು ಸಂಹಾರಕ್ಕಾಗಿ ಯಡಿಯೂರಪ್ಪ ಹೋಮ-ಹವನಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಕಳೆದ ಅಮವಾಸ್ಯೆಯಂದು ಕೇರಳದ ಕಣ್ಣೂರಿನ ಪ್ರಸಿದ್ಧ ಶಿವನ ದೇವಾಲಯ ರಾಜರಾಜೇಶ್ವರ ದೇವಾಲಯದಲ್ಲಿ ಹಲವು ತಂತ್ರಿಗಳಿಂದ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಕಾಲ ವಿಶೇಷ ಯಜ್ಞ-ಯಾಗಾದಿಗಳನ್ನು ನೆರವೇರಿಸಿದ್ದಾರೆ. ಯಡಿಯೂರಪ್ಪ ಮತ್ತೆ ಗದ್ದುಗೆ ಏರುವ ನಿಟ್ಟಿನಲ್ಲಿ ಈ ಎಲ್ಲಾ ಹೋಮ-ಹವನಗಳನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಾಜರಾಜೇಶ್ವರ ದೇವಾಲಯದಲ್ಲಿ ಅಮವಾಸ್ಯೆ ದಿನ ಪ್ರಮುಖವಾಗಿ ರಾಜಸೂಯ ಯಾಗ, ಶತ್ರು ಮರ್ಧಿನಿ ಯಾಗ ಹಾಗೂ ವಶೀಕರಣ ಯಾಗವನ್ನು ಬಿಎಸ್‍ವೈ ನೆರವೇರಿಸಿದ್ದಾರೆ. ಇನ್ನು ನವರಾತ್ರಿ ವೇಳೆಯೂ ಒಂಬತ್ತು ದಿನಗಳ ಕಾಲ ವಿಶೇಷ ಯಾಗ ನಡೆಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...