alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗು ಹೆತ್ತದ್ದಕ್ಕೆ ಪತ್ನಿಯ ಕತ್ತು ಹಿಸುಕಿದ ಯೋಧ

4ccbd8f9cf85039af7a26ff5d030e033_L

ಹೆಣ್ಣು ಮಗುವನ್ನು ಹೆತ್ತದ್ದಕ್ಕೆ ಆಕ್ರೋಶಗೊಂಡ ಬಿಎಸ್ಎಫ್ ಯೋಧನೊಬ್ಬ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ಇಲ್ಲಿನ ಕುರ್ಲಿಯಲ್ಲಿ ಈ ಘಟನೆ ನಡೆದಿದ್ದು, 2014 ರಲ್ಲಿ ಯೋಧ ಸ್ವಪ್ನಿಲ್ ಗೆ ವಿವಾಹ ಮಾಡಲಾಗಿತ್ತು. ಕಳೆದ 5 ತಿಂಗಳ ಹಿಂದೆಯಷ್ಟೇ ಪತ್ನಿ ಶಿವಲೀಲಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಆಕೆಯ ಅತ್ತೆ, ಮಾವ ಹಾಗೂ ಗಂಡನಿಗೆ ಅಸಮಾಧಾನವಿತ್ತು. ಇದೇ ಕಾರಣಕ್ಕೆ ಆಕೆಗೆ ಪ್ರತಿದಿನ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಈ ನಡುವೆ ಛತ್ತೀಸ್ ಘಡದಲ್ಲಿ ಬಿಎಸ್ಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ವಪ್ನಿಲ್ 15 ದಿನಗಳ ಹಿಂದಷ್ಟೇ ರಜೆ ಮೇಲೆ ಬಂದಿದ್ದು, ಹೆಣ್ಣು ಹೆತ್ತಿರುವ ವಿಷಯವಾಗಿ ಪತ್ನಿಯ ಜತೆ ಜಗಳವಾಡಿದ್ದಾನೆ. ಅಷ್ಟೇ ಅಲ್ಲ, ಭಾನುವಾರ ಇದೇ ವಿಷಯವಾಗಿ ಸಿಟ್ಟು ತಾರಕಕ್ಕೇರಿ ಪತ್ನಿ ಶಿವಲೀಲಾ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಶಿವಲೀಲಾ ತಂದೆ ನೀಡಿರುವ ದೂರಿನ ಅನ್ವಯ ಕ್ರಮ ಕೈಗೊಂಡಿರುವ ಪೊಲೀಸರು, ಇದೀಗ ಯೋಧ ಸ್ವಪ್ನಿಲ್, ಆತನ ತಂದೆ ಸುಭಾಷ ವಾಳಕೆ, ಅತ್ತೆ ಛಬೂ ಮತ್ತು ಅರ್ಚನಾ ಎಂಬುವವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...