alex Certify
ಕನ್ನಡ ದುನಿಯಾ       Mobile App
       

Kannada Duniya

ಸುಗಮವಾಗಿಲ್ಲ ಯಡಿಯೂರಪ್ಪನವರ ಮುಂದಿನ ಹಾದಿ

ಬಹುಮತವಿಲ್ಲದಿದ್ರೂ ಯಡಿಯೂರಪ್ಪ ಇಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಿಎಂ ಪಟ್ಟಕ್ಕೇರೋದು ಸುಲಭದ ಮಾತಾಗಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವಾಗಲೇ ಯಡಿಯೂರಪ್ಪ ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ. ಆದ್ರೆ ಮುಂದಿನ ನಡೆ ಇನ್ನೂ ಕಷ್ಟವಾಗಿದೆ.

ಬಹುಮತವಿಲ್ಲದೆ ಸರ್ಕಾರ ರಚನೆ ಹೇಗೆ ಸಾಧ್ಯ ಎಂಬುದನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸುಪ್ರೀಂ ಮೊರೆ ಹೋಗಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೆಲ ದಿನಗಳ ಕಾಲಾವಕಾಶವನ್ನು ಬಿಜೆಪಿಗೆ ನೀಡಿದೆ. ಸಿಎಂ ಪಟ್ಟಕ್ಕೇರಿರುವ ಯಡಿಯೂರಪ್ಪ ಶಾಸಕರ ಬೆಂಬಲ ಪತ್ರವನ್ನು ಸುಪ್ರೀಂ ಕೋರ್ಟ್ ಗೆ ನೀಡಬೇಕಿದೆ.

222 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಹುಮತಕ್ಕೆ ಇನ್ನೂ 8 ಶಾಸಕರ ಬೆಂಬಲ ಬೇಕಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ತನ್ನತ್ತ ಸೆಳೆಯುವುದು ಹಾಗೂ ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡುವ ಯತ್ನದಲ್ಲಿ ಬಿಜೆಪಿ ನಿರತವಾಗಿದೆ.

ರಾಜ್ಯದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಿ ಎಂದು ರಾಜ್ಯಪಾಲರಿಗೆ ಬಿಜೆಪಿ ಹೇಳಿತ್ತು. ರಾಜ್ಯಪಾಲರು ಒಪ್ಪಿಗೆ ನೀಡಿ ಬಹುಮತ ಸಾಬೀತಿಗೆ 15 ದಿನಗಳ ಅವಕಾಶ ನೀಡಿದ್ದಾರೆ. ಆದ್ರೆ ಇದನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧಿಸುತ್ತಿದೆ. ರಾಜಭವನದ ಮುಂದೆ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ.

ಸುಪ್ರೀಂ ಕೋರ್ಟ್ ಶುಕ್ರವಾರ 10.30ಕ್ಕೆ ಮತ್ತೆ ಈ ಪ್ರಕರಣ ವಿಚಾರಣೆ ನಡೆಸಲಿದೆ. ಈ ವೇಳೆ ಬಿಜೆಪಿ ಶಾಸಕರ ಪಟ್ಟಿಯನ್ನು ನೀಡಬೇಕು. ಬಿಜೆಪಿ ಪಕ್ಷೇತರರನ್ನು ಸೇರಿಸಿ 107 ಶಾಸಕರ ಪಟ್ಟಿ ನೀಡಬಹುದು. ಉಳಿದ 5 ಶಾಸಕರ ಕೊರತೆ ಕಂಡಲ್ಲಿ ಯಡಿಯೂರಪ್ಪ ಖುರ್ಚಿಯಿಂದ ಇಳಿಯಬೇಕಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...