alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡಪ್ಪನ ಮಗನ ನಂಬಿ ಬಂದವಳಿಗೆ ಏನಾಯ್ತು…?

ಶಿವಮೊಗ್ಗ: ವರಸೆಯಲ್ಲಿ ದೊಡ್ಡಪ್ಪನ ಮಗನಾಗಿದ್ದ ಯುವಕನೊಂದಿಗೆ ವಾಸವಾಗಿದ್ದ ಮಹಿಳೆ, ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಲಕ್ಕಿನಕೊಪ್ಪದಲ್ಲಿ ಪ್ರಿಯಕರನೊಂದಿಗೆ ವಾಸವಾಗಿದ್ದ ಮಂಡ್ಯ ಮೂಲದ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರಿನ ಯುವಕನೊಂದಿಗೆ ಆಕೆಯ ಮದುವೆಯಾಗಿದ್ದು, 1 ಮಗು ಕೂಡ ಇತ್ತು. ದಂಪತಿ ಅನ್ಯೋನ್ಯವಾಗಿಯೇ ಇದ್ದರು.

ದೊಡ್ಡಪ್ಪನ ಮಗನಾಗಿದ್ದ ಯುವಕ, ಮಹಿಳೆಯೊಂದಿಗೆ ಗೆಳೆತನ ಬೆಳೆಸಿ, ಗಂಡ, ಮಗುವಿನಿಂದ ದೂರ ಮಾಡಿ ಆಕೆಯನ್ನು ಕರೆದುಕೊಂಡು ಬಂದಿದ್ದು, ಲಕ್ಕಿನಕೊಪ್ಪದ ಬಾಡಿಗೆ ಮನೆಯಲ್ಲಿ ಇಟ್ಟಿದ್ದಾನೆ. 6 ತಿಂಗಳಿಂದ ಇವರು ಒಟ್ಟಿಗೆ ವಾಸವಾಗಿದ್ದು, 3 ತಿಂಗಳ ಹಿಂದೆ ಮಹಿಳೆಯ ತಾಯಿ ಹಾಗೂ ಸಂಬಂಧಿಕರು ಬುದ್ಧಿವಾದ ಹೇಳಿ ಕರೆದುಕೊಂಡು ಹೋಗಿದ್ದಾರೆ.

ಆದರೆ, ಮತ್ತೆ ವಾಪಸ್ ಬಂದಿದ್ದ ಮಹಿಳೆ ಶನಿವಾರ ರಾತ್ರಿ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರ ಸಂಬಂಧಿಕರು ಪ್ರಿಯಕರನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ತುಂಗಾನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...