alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ತಿರುವು ಪಡೆದಿದೆ ಭಾವ –ಸೊಸೆ ಅಕ್ರಮ ಸಂಬಂಧ…?

ಮೈಸೂರು: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಮ್ಮನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆತನಿಗೆ ಬೈದು ಬುದ್ದಿ ಹೇಳುವ ಬದಲಿಗೆ ತಮ್ಮನ ಪತ್ನಿಯನ್ನು ಕೊಟ್ಟು ಮದುವೆ ಮಾಡಲಾಗಿದೆ.

ಆಕೆಯೊಂದಿಗೆ ಕೆಲವು ದಿನ ಸಂಸಾರ ಮಾಡಿದ ವ್ಯಕ್ತಿ ಬಳಿಕ ಡೆತ್ ನೋಟ್ ಬರೆದಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚನ್ನರಾಯಪಟ್ಟಣದ ಶಿವಪುರ ಗ್ರಾಮಸ್ಥರು ಒತ್ತಡದಿಂದ ಮದುವೆ ಮಾಡಿರುವ ಆರೋಪ ಕೇಳಿ ಬಂದಿದೆ.

ಹೆಚ್.ಡಿ. ಕೋಟೆ ತಾಲ್ಲೂಕಿನ ವ್ಯಕ್ತಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಶಿವಪುರದಲ್ಲಿ ತಮ್ಮನ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ತಮ್ಮನ ಪತ್ನಿಯನ್ನು ಆತನಿಗೆ ಕೊಟ್ಟು ಮದುವೆ ಮಾಡಲಾಗಿದೆ. ಆದರೆ, ಅವರ ನಡುವೆ ಅನೈತಿಕ ಸಂಬಂಧ ಇದ್ದು, ಅದನ್ನು ಮರೆ ಮಾಚುವ ಉದ್ದೇಶದಿಂದ ತಮ್ಮನೇ ಪತ್ನಿಯನ್ನು ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾನೆ ಎನ್ನಲಾಗಿದೆ.

ತಮ್ಮನ ಪತ್ನಿಯೊಂದಿಗೆ ಸಂಸಾರ ನಡೆಸದಿದ್ದರೆ, ಲಕ್ಷಾಂತರ ರೂ. ದಂಡ ಕಟ್ಟುವಂತೆ ಗ್ರಾಮಸ್ಥರು ಬೆದರಿಸಿದ್ದರಿಂದ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಆತನ ಮೊದಲ ಪತ್ನಿ ಹೆಚ್.ಡಿ. ಕೋಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...