alex Certify
ಕನ್ನಡ ದುನಿಯಾ       Mobile App
       

Kannada Duniya

ಜನಸಾಮಾನ್ಯರಂತೆ ಹಂಪಿ ಸುತ್ತಾಡಿದ್ದಾರೆ ಈ ದಂಪತಿ

ಬ್ರಿಟಿಷ್ ಹೈ ಕಮಿಷನರ್ ಸರ್ ಡೊಮಿನಿಕ್ ಅಸ್ಕ್ವಿತ್ ಮತ್ತು ಪತ್ನಿ ಲೇಡಿ ಅಸ್ಕ್ವಿತ್ ದಂಪತಿ ಜನಸಾಮಾನ್ಯರಂತೆ ಬೆಂಗಳೂರಿನಿಂದ ಹಂಪಿಗೆ ರೈಲಿನಲ್ಲಿ ಪ್ರಯಾಣಿಸಿ ವಿಶ್ವವಿಖ್ಯಾತ ಪ್ರವಾಸಿ ತಾಣವನ್ನು ವೀಕ್ಷಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಎರಡು ದಿನಗಳ ಹಂಪಿ ಪ್ರವಾಸದಲ್ಲಿರುವ ಬ್ರಿಟಿಷ್ ಹೈ ಕಮಿಷನರ್ ದಂಪತಿ, ಬೆಂಗಳೂರಿನಿಂದ ಹಂಪಿಗೆ ಹಂಪಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಬಳಿಕ ವಿರೂಪಾಕ್ಷ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಂಪಿಯಲ್ಲಿಯೂ ಸಾಮಾನ್ಯ ಪ್ರವಾಸಿಗರಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದರು. ಇಲ್ಲಿನ ಸ್ಮಾರಕಗಳನ್ನು ನೋಡಿ ಸಂತಸಪಟ್ಟರು.

ಹಂಪಿಯ ಶಿವನ ದೇವಾಲಯ, ಆನೆಯ ಮೂರ್ತಿ, ತಾವರೆ ಅರಮನೆ, ರಾಣಿ ಸ್ನಾನಗೃಹ ಇತ್ಯಾದಿ ಸ್ಮಾರಕಗಳಿಗೆ ಭೇಟಿ ನೀಡಿ, ಪ್ರತಿಯೊಬ್ಬರೂ ಜೀವಿತಾವಧಿಯಲ್ಲಿ ಹಂಪಿಗೆ ಭೇಟಿ ನೀಡಬೇಕು ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...