alex Certify
ಕನ್ನಡ ದುನಿಯಾ       Mobile App
       

Kannada Duniya

ಮಾದರಿ ಕೆಲಸ ಮಾಡಿದ ಚಿತ್ರದುರ್ಗ ಡಿ.ಸಿ.

ಚಿತ್ರದುರ್ಗ: ನಾಡಿನ ಜನರೆಲ್ಲ ದಸರಾ ಹಬ್ಬದ ಸಂಭ್ರಮದಲ್ಲಿದ್ದರೆ, ಅನೇಕ ಭಾಗದಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಮಣ್ಣು ಕುಸಿದು, ವೇದಾವತಿ ನದಿ ಸೇತುವೆಗೆ ಹಾನಿಯಾಗುವ ಅಪಾಯ ಎದುರಾಗಿದೆ.

ಹಳೆ ಸೇತುವೆ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣಕ್ಕೆ ಆಳದ ಗುಂಡಿಗಳನ್ನು ತೆಗೆಯಲಾಗಿದ್ದು, ಭಾರೀ ಮಳೆಯಾದ ಕಾರಣ ಗುಂಡಿಯಲ್ಲಿ ನೀರು ತುಂಬಿ ಹಳೆ ಸೇತುವೆ ಪಕ್ಕದ ಮಣ್ಣು ಕುಸಿಯಲಾರಂಭಿಸಿದೆ.

ಮುಂಜಾಗ್ರತೆ ಕ್ರಮವಾಗಿ ವಾಹನಗಳ ಸಂಚಾರ ಮಾರ್ಗ ಬದಲಿಸಲಾಗಿದೆ. ಮಣ್ಣು ಕುಸಿತ ತಡೆಗೆ ಮರಳುಚೀಲ ಹಾಕಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಚಿತ್ರದುರ್ಗ ಜಿಲ್ಲಾಧಿಕಾರಿ ವಿಜಯ ಜೋತ್ಸ್ನಾ ಪರಿಶೀಲನೆ ನಡೆಸಿದ್ದಾರೆ. ಕಾರ್ಮಿಕರು ಕೆಲಸ ಮಾಡುತ್ತಿದ್ದುದನ್ನು ಗಮನಿಸಿದ ಅವರೂ, ಮರಳು ತುಂಬಿಸಿ ಕೊಟ್ಟಿದ್ದಾರೆ.

ಜಿಲ್ಲಾಧಿಕಾರಿಯೇ ಮರಳು ತುಂಬಿದ್ದನ್ನು ನೋಡಿದ ಅಧಿಕಾರಿಗಳು, ಕಾರ್ಮಿಕರು ಉತ್ಸಾಹದಿಂದ ಮರಳು ತುಂಬಿಸಿದ್ದಾರೆ. ಮಣ್ಣು ಕುಸಿತ ತಡೆಗೆ ಮರಳು ಚೀಲ ಹಾಕಲಾಗಿದೆ. ಡಿ.ಸಿ.ಯವರ ಮಾದರಿ ಕೆಲಸಕ್ಕೆ ಸ್ಥಳದಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...