alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾ ಶೈಲಿಯಲ್ಲಿ ಮಂಟಪಕ್ಕೆ ಪ್ರಿಯಕರನ ಎಂಟ್ರಿ…! ಕೊನೆ ಕ್ಷಣದಲ್ಲಿ ರದ್ದಾಯ್ತು ಮದುವೆ

ಪ್ರಿಯಕರನೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಯ ವಿವಾಹ ಮತ್ತೊಬ್ಬನೊಂದಿಗೆ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ಸಿನಿಮಾ ಶೈಲಿಯಲ್ಲಿ ಎಂಟ್ರಿ ಕೊಟ್ಟು ರಾದ್ದಾಂತ ಸೃಷ್ಠಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲದ ಪ್ರತಿಷ್ಠಿತ ಕಲ್ಯಾಣ ಮಂಟಪದಲ್ಲಿ ಈ ವಿವಾಹ ನಡೆಯಬೇಕಾಗಿದ್ದು, ವಧುವನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ, ಹಿಂದಿನ ರಾತ್ರಿಯಿಂದಲೇ ಕಲ್ಯಾಣ ಮಂಟಪದಲ್ಲಿ ಬೀಡು ಬಿಟ್ಟಿದ್ದನೆನ್ನಲಾಗಿದೆ.

ಬೆಳಗ್ಗೆ ವರ ತಾಳಿ ಕಟ್ಟುವ ವೇಳೆ ದಿಢೀರನೆ ಈತ ಎಂಟ್ರಿ ಕೊಟ್ಟಿದ್ದು, ಪ್ರಿಯಕರನನ್ನು ನೋಡುತ್ತಲೇ ವಧು, ತಾನು ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾಳೆ. ಇದರಿಂದಾಗಿ ಕೆಲಕಾಲ ಗೊಂದಲ ಸೃಷ್ಟಿಯಾಗಿದ್ದು ಬಳಿಕ ಮದುವೆ ಮುರಿದು ಬಿದ್ದಿದೆ. ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...