alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗೆ ಸಮಸ್ಯೆ ತಂದೊಡ್ಡಿದ್ದ ಶರ್ಟ್

Cutting-sleeves3457ಐಐಟಿ-ಜೆಇಇ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯೊಬ್ಬ ಪೀಕಲಾಟ ಅನುಭವಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಇದಕ್ಕೆ ಕಾರಣವಾಗಿದ್ದು, ಆತ ಧರಿಸಿದ್ದ ತುಂಬು ತೋಳಿನ ಶರ್ಟ್ ಎಂಬುದು ಅಚ್ಚರಿಯಾದರೂ ಸತ್ಯ.

ಮೈಸೂರಿನ ಸದ್ವಿದ್ಯಾ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಿದ್ದ ಈ ವಿದ್ಯಾರ್ಥಿ ತುಂಬು ತೋಳಿನ ಶರ್ಟ್ ಧರಿಸಿದ್ದರು. ಆದರೆ ಪರೀಕ್ಷಾ ಅಕ್ರಮ ತಡೆಯುವುದಕ್ಕಾಗಿ ಐಐಟಿ ಪರೀಕ್ಷೆಯಲ್ಲಿ ತುಂಬು ತೋಳಿನ ಶರ್ಟ್ ಧರಿಸಿಕೊಂಡು ಬರಬಾರದೆಂಬ ನಿಯಾಮವಳಿಯಿದ್ದು, ತನ್ನ ಲಕ್ಕಿ ಶರ್ಟ್ ಎನ್ನುವ ಕಾರಣಕ್ಕಾಗಿ ವಿದ್ಯಾರ್ಥಿ ಈ ಶರ್ಟ್ ಧರಿಸಿಕೊಂಡು ಬಂದಿದ್ದರು.

ಆದರೆ ನಿಯಾಮವಳಿಯಂತೆ ಅರ್ಧ ತೋಳಿನ ಶರ್ಟ್ ಧರಿಸಬೇಕೆಂದು ಪರೀಕ್ಷಾ ಮೇಲ್ವಿಚಾರಕರು ವಿದ್ಯಾರ್ಥಿಗೆ ಸೂಚಿಸಿದ್ದಾರೆ. ಹೊಸ ಶರ್ಟ್ ತರೋಣವೆಂದರೆ ಭಾನುವಾರವಾದ ಕಾರಣ ಯಾವುದೇ ಅಂಗಡಿಗಳು ತೆರೆದಿರಲಿಲ್ಲ. ಇನ್ನು ಮನೆಗೆ ಹೋಗಿ ಬರೋಣವೆಂದರೆ ವಿದ್ಯಾರ್ಥಿ ಮನೆಯಿರುವುದು  ಹೆಗ್ಗಡೆದೇವನಕೋಟೆಯಲ್ಲಿ. ಜೊತೆಯಲ್ಲಿ ಬಂದಿದ್ದ ತನ್ನ ತಂದೆಯ ಟೀ ಶರ್ಟ್ ಅನ್ನು ವಿದ್ಯಾರ್ಥಿ ಧರಿಸಿದರೂ ಆತನ ಶರ್ಟ್ ತಂದೆಗೆ ತುಂಬಾ ಗಿಡ್ಡವಾಗುತ್ತಿತ್ತು.

ಕೊನೆಗೆ ಪರೀಕ್ಷಾ ಮೇಲ್ವಿಚಾರಕರೇ ಉಪಾಯವೊಂದನ್ನು ಸೂಚಿಸಿದ್ದಾರೆ. ತುಂಬು ತೋಳಿನ ಶರ್ಟ್ ನ್ನು ಕತ್ತರಿಸಿ ಅರ್ಧತೋಳು ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅದರಂತೆ ಕತ್ತರಿಯಿಂದ ತನ್ನ ಶರ್ಟ್ ನ ತೋಳುಗಳನ್ನು ಕತ್ತರಿಸಿ ಅದನ್ನು ಧರಿಸಿಕೊಂಡು ಈ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ. ಕೊನೆಗೂ ತನ್ನ ಲಕ್ಕಿ ಶರ್ಟ್ ಧರಿಸಿಯೇ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದ ಖುಷಿ ವಿದ್ಯಾರ್ಥಿಯದ್ದಾದರೆ ನಿಯಾಮಾವಳಿಯನ್ನು ಪಾಲಿಸಿದ ತೃಪ್ತಿ ಪರೀಕ್ಷೆ ಮೇಲ್ವಿಚಾರಕರಿಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...