alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಪಾಠಿಗೆ ಇರಿದಿದ್ದಾನೆ 10ನೇ ಕ್ಲಾಸ್ ವಿದ್ಯಾರ್ಥಿ

 

ಬೆಂಗಳೂರಿನ ಬಾಣಸವಾಡಿಯಲ್ಲಿ 16 ವರ್ಷದ ಹುಡುಗನೊಬ್ಬ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿದ್ದಾನೆ. ಮೂರು ಬಾರಿ ಚಾಕು ಇರಿತಕ್ಕೊಳಗಾಗಿರುವ ಬಾಲಕನಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ.

ಘಟನೆ ಬಗ್ಗೆ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಬಾಲಾಪರಾಧ ನ್ಯಾಯ ಮಂಡಳಿಗೆ ಹಸ್ತಾಂತರಿಸಲಾಗಿದೆ. ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಧ್ಯಾಹ್ನ 3.45ರ ವೇಳೆಗೆ ಹಲ್ಲೆಗೊಳಗಾಗಿರೋ ಬಾಲಕ ಶಾಲೆಯಿಂದ ಹೊರಬರುತ್ತಿದ್ದ.

ಆತನನ್ನು ಹಿಂಬಾಲಿಸಿ ಬಂದ ಇನ್ನೊಬ್ಬ ವಿದ್ಯಾರ್ಥಿ ಜಗಳ ಶುರು ಮಾಡಿದ್ದಾನೆ. ನನ್ನ ಬಗ್ಗೆ ಶಾಲೆಯಲ್ಲಿ ಕೆಟ್ಟದಾಗಿ ಮಾತನಾಡಿದ್ದೀಯಾ ಅಂತೆಲ್ಲಾ ಆರೋಪಿಸಿದ್ದಾನೆ. ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಆಗ ವಿದ್ಯಾರ್ಥಿ ತನ್ನ ಬಳಿಯಿದ್ದ ನೇಲ್ ಕ್ಲಿಪ್ಪರ್ ನಲ್ಲಿದ್ದ ಚಿಕ್ಕ ಚಾಕುವಿನಿಂದ ಸಹಪಾಠಿಗೆ ಚುಚ್ಚಿದ್ದಾನೆ.

ನಂತರ ಅಲ್ಲಿಂದ ಓಡಿ ಹೋಗಿದ್ದಾನೆ. ಚಾಕು ಇರಿತಕ್ಕೊಳಗಾದ ಬಾಲಕ ನೋವಿನಿಂದ ನರಳುತ್ತಿರುವುದನ್ನು ಗಮನಿಸಿ ಆತನ ಸಂಬಂಧಿ, ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...