alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕು ಎಂದುಕೊಂಡು ಚಿರತೆ ಮರಿಯೊಡನೆ ಆಡುತ್ತಿದ್ದ ಬಾಲಕ

boy-mistakes-leopard-cubs-for-cats-plays-with-themಬೆಂಗಳೂರಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ 6 ವರ್ಷದ ಬಾಲಕನೊಬ್ಬ ಎರಡು ದಿನಗಳಿಂದ ಬೆಕ್ಕು ಎಂದುಕೊಂಡು ಚಿರತೆ ಮರಿಗಳೊಡನೆ ಆಟವಾಡುತ್ತಿದ್ದ. ಪೊದೆಯ ಬಳಿ ಓಡಾಡಿಕೊಂಡಿದ್ದ ಚೀತಾ ಮರಿಗಳು ಬಾಲಕನ ಕಣ್ಣಿಗೆ ಬಿದ್ದಿದ್ವು. ಬೆಕ್ಕು ಎಂದುಕೊಂಡು ಅವನ್ನು ಮನೆಗೆ ತಂದಿದ್ದ.

ಅದಕ್ಕೆ ಹಾಲು, ತಿಂಡಿ ತಿನಿಸು ಹಾಕ್ತಾ ಇದ್ದ. ಅವು ಮನೆತುಂಬ ಲವಲವಿಕೆಯಿಂದ ಓಡಾಡಿಕೊಂಡಿದ್ವು. ದಿನವಿಡೀ ಮರಿಗಳ ಜೊತೆಗೆ ಆಟವಾಡ್ತಾ ಇದ್ದ. ಅವು ಬೆಕ್ಕಲ್ಲ, ಚಿರತೆ ಮರಿಗಳು ಅನ್ನೋ ಕಲ್ಪನೆ ಕೂಡ ಹೆತ್ತವರಿಗೆ ಇರಲಿಲ್ಲ. ಅಕ್ಕಪಕ್ಕದವರು ಗಮನಿಸಿ ಎಚ್ಚರಿಕೆ ನೀಡಿದ ಬಳಿಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯಾಧಿಕಾರಿಗಳು ಚಿರತೆ ಮರಿಗಳನ್ನು ಕೊಂಡೊಯ್ದು ಕಾಡಿನಲ್ಲಿ ಬಿಟ್ಟಿದ್ದಾರೆ. ಅಲ್ಲೇ ಹತ್ತಿರದಲ್ಲೆಲ್ಲಾದ್ರೂ ತಾಯಿ ಚಿರತೆ ಇದ್ದಿದ್ರೆ ಬಾಲಕ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು. ಚಿರತೆಗಳು ಒಮ್ಮೆಲೆ 2-6 ಮರಿಗಳಿಗೆ ಜನ್ಮ ನೀಡುತ್ತವೆ. ಹುಟ್ಟಿ 10 ದಿನಗಳ ಬಳಿಕ ಚಿರತೆ ಮರಿಗಳು ಕಣ್ಣು ತೆರೆಯುತ್ತವೆ. ಸಾಮಾನ್ಯವಾಗಿ 2 ವರ್ಷದವರೆಗೂ ತಾಯಿಯ ಜೊತೆಗೇ ಇರುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...