alex Certify
ಕನ್ನಡ ದುನಿಯಾ       Mobile App
       

Kannada Duniya

ರೋಡ್ ರೋಲರ್ ಗೆ 11 ವರ್ಷದ ಬಾಲಕ ಬಲಿ

ರಸ್ತೆ ಕಾಮಗಾರಿ ನಡೆಸುತ್ತಿದ್ದ ರೋಡ್ ರೋಲರ್ ಗೆ ಸಿಲುಕಿ 11 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ಹೆಮ್ಮಿಗೆಪುರ ವಾರ್ಡ್ ನಂಬರ್ 198 ರಲ್ಲಿ ನಡೆದಿದೆ.

ಚಾಮರಾಜನಗರ ಮೂಲದ ರವಿ ಹಾಗೂ ಮಂಗಳ ದಂಪತಿಯ ಪುತ್ರ ಮನು ಮೃತಪಟ್ಟ ದುರ್ದೈವಿಯಾಗಿದ್ದು, ಈತ ಶುಕ್ರವಾರ ಮಧ್ಯಾಹ್ನ ತಾಯಿ ಬಳಿ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಸೈಕಲ್ ನಲ್ಲಿ ತೆರಳಿದ್ದನೆನ್ನಲಾಗಿದೆ.

ಮನು ಶಾಲೆಯಿಂದ ವಾಪಸ್ ಬರುವಾಗ ಜಲ್ಲಿ ಸಮತಟ್ಟು ಕಾರ್ಯ ಮಾಡುತ್ತಿದ್ದ ರೋಡ್ ರೋಲರ್ ಚಾಲಕ ನಿರ್ಲಕ್ಷವಾಗಿ ಚಾಲನೆ ಮಾಡಿದ ಪರಿಣಾಮ ಡಿಕ್ಕಿ ಸಂಭವಿಸಿ ಬಾಲಕ ಸಾವಿಗೀಡಾಗಿದ್ದಾನೆ.

ಅಪಘಾತ ನಡೆಯುತ್ತಿದ್ದಂತೆಯೇ ರೋಡ್ ರೋಲರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಗುತ್ತಿಗೆದಾರರನ್ನು ವಶಕ್ಕೆ ಪಡೆದಿರುವ ಪೊಲೀಸರು, ಚಾಲಕನ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ಪುತ್ರನನ್ನು ಕಳೆದುಕೊಂಡ ಪೋಷಕರ ರೋಧನ ಮುಗಿಲು ಮುಟ್ಟಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆಯನ್ನು ಚಾಮರಾಜನಗರದಲ್ಲಿ ನೆರವೇರಿಸಲು ನಿರ್ಧರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...