alex Certify
ಕನ್ನಡ ದುನಿಯಾ       Mobile App
       

Kannada Duniya

ಇದನ್ನು ‘ದೇವಿ ಮಹಿಮೆ’ ಅಂತಿದ್ದಾರೆ ಜನ !

water-flow

ಬೋರ್ ವೆಲ್ ಗಳಿಂದ ನೀರು ಮೇಲೆ ಬರಲು ಕೈ ಪಂಪ್ ಅಳವಡಿಸಬೇಕು. ಅದಿಲ್ಲದಿದ್ದರೆ, ಪಂಪ್ ಸೆಟ್ ಆದರೂ, ಇರಲೇಬೇಕು. ಆದರೆ, ಇದ್ಯಾವುದೂ ಇಲ್ಲದೇ ಬೋರ್ ವೆಲ್ ನಿಂದ ನೀರು ಉಕ್ಕುತ್ತಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಈ ಬಾರಿ ಎಲ್ಲಾ ಕಡೆಗಳಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದ್ದು, ಹನಿ ನೀರಿಗೂ ಜನ ಪರಿತಪಿಸುವಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಭೀಕರ ಬರಗಾಲ ಆವರಿಸಿದೆ. ಜನರಿಗೆ ನೀರಿಲ್ಲದೆ ದಿಕ್ಕು ತೋಚದಂತಾಗಿದೆ. ಕೊರೆಸಿದ ಬೋರ್ ವೆಲ್ ಗಳೆಲ್ಲಾ ಫೇಲ್ ಆಗಿವೆ. ಆದರೆ, ಒಂದು ಬೋರ್ ವೆಲ್ ನಲ್ಲಿ ಮಾತ್ರ ಪಂಪ್ ಸೆಟ್ ಹಾಕದಿದ್ದರೂ, ನೀರು ಉಕ್ಕುತ್ತಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಂಡಿ ಬಸಪ್ಪನ ತಾಂಡಾದ ದೇವಾಲಯ ಸಮೀಪ ಕೊರೆಸಿರುವ ಬೋರ್ ವೆಲ್ ನಲ್ಲಿ ಈ ಪವಾಡ ನಡೆದಿದೆ.

ದೇವಿಯ ಜಾತ್ರೆಯ ಪ್ರಯುಕ್ತ ನೀರಿನ ವ್ಯವಸ್ಥೆಗೆ ಬೋರ್ ವೆಲ್ ಕೊರೆಸಲಾಗಿತ್ತು. ಇನ್ನೂ ಪಂಪ್ ಅಳವಡಿಸಿರಲಿಲ್ಲವಾದರೂ, ನೀರು ಬರುತ್ತಿದೆ. ಇದನ್ನು ನೋಡಲು ಜನಜಾತ್ರೆಯೇ ನೆರೆದಿದ್ದು, ಇದೆಲ್ಲಾ ದೇವಿಯ ಮಹಿಮೆ ಎಂದು ಜನ ಮಾತಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...