alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರೇ ಗಮನಿಸಿ: ನಾಳೆ ಕೆ.ಎಸ್.ಆರ್.ಟಿ.ಸಿ.-ಬಿಎಂಟಿಸಿ ಬಸ್ ಸಂಚಾರ ಡೌಟ್

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೋಟಾರು ಸಾರಿಗೆ ಕಾಯ್ದೆ 2017 ವಿರೋಧಿಸಿ ಆಗಸ್ಟ್ 7 ರಂದು ದೇಶಾದ್ಯಂತ ಸಾರಿಗೆ ಮುಷ್ಕರ ನಡೆಸಲು ನಿರ್ಧರಿಸಲಾಗಿದ್ದು, ನಾಳೆ ಬಿಎಂಟಿಸಿ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಉದ್ದೇಶಿತ ಕಾಯ್ದೆಯಲ್ಲಿ ವಾಹನ ಅಪಘಾತ ಸಂಭವಿಸಿದ ವೇಳೆ ಚಾಲಕರಿಗೆ 10 ಲಕ್ಷ ರೂ. ಗಳವರೆಗೆ ದಂಡ ವಿಧಿಸುವುದು, ಸಿಗ್ನಲ್ ಜಂಪ್ ಅಪರಾಧಕ್ಕೆ 1500 ರೂ. ದಂಡ ಸೇರಿದಂತೆ ಹಲವು ನಿಯಮಗಳಿದ್ದು, ಇದನ್ನು ವಿರೋಧಿಸಿ ಸಾರಿಗೆ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

ಈ ಕಾಯ್ದೆ ಜಾರಿಗೊಂಡಲ್ಲಿ ಅದು ಸಾರಿಗೆ ವ್ಯವಸ್ಥೆಗೆ ಮರಣ ಶಾಸನವಾಗಲಿದೆ ಎಂದಿರುವ ಸಾರಿಗೆ ಸಂಘಟನೆಗಳು ಇದಕ್ಕೆ ಮಾರ್ಪಾಡು ತರಬೇಕೆಂದು ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿವೆ. ಈ ಮುಷ್ಕರವನ್ನು ಬಿಎಂಟಿಸಿ ಹಾಗೂ ಕೆ.ಎಸ್.ಆರ್.ಟಿ.ಸಿ. ನೌಕರರು ಬೆಂಬಲಿಸಿ ಭಾಗವಹಿಸುವ ನಿರೀಕ್ಷೆಯಿದ್ದು, ಆಗಸ್ಟ್ 7 ರಂದು ಬಸ್ ಸಂಚಾರ ವ್ಯತ್ಯಯವಾಗುವ ಸಾಧ್ಯತೆಯಿದೆ. ಈ ಮುಷ್ಕರಕ್ಕೆ ಮೆಟ್ರೋ ಸಿಬ್ಬಂದಿ ಕೂಡಾ ಸಾಂಕೇತಿಕವಾಗಿ ಬೆಂಬಲಿಸಲಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...