alex Certify
ಕನ್ನಡ ದುನಿಯಾ       Mobile App
       

Kannada Duniya

ನಷ್ಟ ತುಂಬಲು ಬಿಎಂಟಿಸಿ ಹೊಸ ಪ್ಲಾನ್

download

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ನಷ್ಟ ತುಂಬುವುದು ಹೇಗೆ ಎಂಬ ಚಿಂತೆ ಸದ್ಯ ಬಿಎಂಟಿಸಿಯನ್ನು ಕಾಡ್ತಿದೆ. ನಷ್ಟ ತುಂಬಲು ಈಗ ಬಿಎಂಟಿಸಿ ಹೊಸ ಪ್ಲಾನ್ ಜಾರಿಗೆ ತರುವ ಚಿಂತನೆಯಲ್ಲಿದೆ. ಖಾಸಗಿ ಸಹಭಾಗಿತ್ವದೊಂದಿಗೆ ಬಸ್ ಖರೀದಿಗೆ ಬಿಎಂಟಿಸಿ ಚಿಂತನೆ ನಡೆಸುತ್ತಿದೆ.

ಖಾಸಗಿ ಸಹಭಾಗಿತ್ವದಲ್ಲಿ ಬಸ್ ಖರೀದಿ ಮಾಡುವ ಯೋಜನೆ ಇನ್ನೂ ಪ್ರಸ್ತಾವನೆಯಲ್ಲಿದ್ದು, ಅದರಿಂದಾಗುವ    ಲಾಭ-ನಷ್ಟಗಳನ್ನು ಲೆಕ್ಕ ಹಾಕಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಬಿಎಂಟಿಸಿ ಉಪಾಧ್ಯಕ್ಷ ಗೋವಿಂದ ರಾಜು ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು ಲಕ್ನೋ ಸೇರಿದಂತೆ ಅನೇಕ ನಗರಗಳಲ್ಲಿ ಈ ಯೋಜನೆ ಇದೆ. ಅದ್ರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು ಎಂದಿದ್ದಾರೆ.

ಖಾಸಗಿ ಸಹಭಾಗಿತ್ವದಲ್ಲಿ ಬಸ್ ಖರೀದಿ ಮಾಡಿದ್ರೆ ಬಸ್ ಹಾಗೂ ಚಾಲಕ ಖಾಸಗಿಯಾಗಿರಲಿದೆ. ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನೇಮಕ ಮಾಡಲಿದೆ.  ಕಿಲೋಮೀಟರ್ ಲೆಕ್ಕದಲ್ಲಿ ಖಾಸಗಿ ನೌಕರರಿಗೆ ಸಂಬಳ ನೀಡಲಾಗುವುದು. ಈಗಾಗಲೇ 8 ಸಾವಿರ ಬಸ್ ಬಿಎಂಟಿಸಿ ಬಳಿ ಇದ್ದು ಇನ್ನೂ 500 ಬಸ್ ಖಾಸಗಿ ಸಹಭಾಗಿತ್ವದಲ್ಲಿ ರಸ್ತೆಗಿಳಿಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...