alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತ್ ಶಾ ಗರಂ ಆಗಿಲ್ಲ: ಬಿ.ಎಸ್.ವೈ.

ತುಮಕೂರು: ಬಿ.ಜೆ.ಪಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ರಣಕಹಳೆ ಮೊಳಗಿಸಿದ್ದು, ನವ ಕರ್ನಾಟಕ ಪರಿವರ್ತನಾ ಯಾತ್ರೆ ಕೈಗೊಂಡಿದೆ.

ಮೊದಲ ದಿನದ ಯಾತ್ರೆ ಯಶಸ್ವಿಯಾಗಿದ್ದು, 2 ನೇ ದಿನ ಶ್ರೀ ಕ್ಷೇತ್ರ ಯಡೆಯೂರಿನಲ್ಲಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪೂಜೆಯ ಬಳಿಕ 2 ನೇ ದಿನದ ಯಾತ್ರೆಯನ್ನು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗರಂ ಆಗಿದ್ದಾರೆ ಎಂಬ ವಿಚಾರದಲ್ಲಿ ಸತ್ಯಾಂಶವಿಲ್ಲ. ಹೆಚ್ಚಿನ ಕಾರ್ಯಕರ್ತರು, ಜನ ಬೈಕ್ ಗಳಲ್ಲಿ ಆಗಮಿಸಿದ್ದು, ತಮ್ಮ ಬೈಕ್ ಗಳ ಬಳಿಯಲ್ಲೇ ನಿಂತಿದ್ದರು. ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಹೆಚ್ಚಿನ ಜನ ಆಗಮಿಸಿದ್ದರು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅನೇಕ ಸಚಿವರು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಸಚಿವ ಕೆ.ಜೆ. ಜಾರ್ಜ್ ಅವರ ವಿರುದ್ಧ ಸಿ.ಬಿ.ಐ. ತನಿಖೆ ನಡೆಯುತ್ತಿದೆ. ಮುಂದಿನ ಅಧಿವೇಶನದಲ್ಲಿ ಅವರ ವಿರುದ್ಧ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಯವರಿಗೆ ಸೊಕ್ಕು ಹೆಚ್ಚಾಗಿದೆ. ಇನ್ನು ನಾಲ್ಕೂವರೆ ತಿಂಗಳಲ್ಲಿ ಅದೆಲ್ಲ ಇಳಿಯಲಿದೆ. ಮೊದಲ ದಿನದ ಯಾತ್ರೆ ಯಶಸ್ವಿಯಾಗಿದ್ದು, 2 ನೇ ದಿನದ ಯಾತ್ರೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...