alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ಟಿಕೇಟ್ ಆಕಾಂಕ್ಷಿಗಳಿಗೆ ಅಮಿತ್ ಷಾ ‘ಬಿಗ್ ಶಾಕ್’

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿ ಟಿಕೇಟ್ ಖಚಿತ ಎಂದು ನಂಬಿಕೊಂಡಿದ್ದವರಿಗೆ ಪಕ್ಷದ ರಾಜ್ಯಾಧ್ಯಕ್ಷ ಅಮಿತ್ ಷಾ, ಬಿಗ್ ಶಾಕ್ ನೀಡಿದ್ದಾರೆ. ಅಮಿತ್ ಷಾ ಸೂಚನೆ ಮೇರೆಗೆ ಮಾರ್ಚ್ 10 ರಂದು 55 ಮಂದಿಯ ವೀಕ್ಷಕರ ತಂಡ ರಾಜ್ಯಕ್ಕೆ ಆಗಮಿಸಲಿದ್ದು, 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಲಿದ್ದಾರೆ. ಅದರಲ್ಲಿ ಪಾಸ್ ಆದವರಿಗೆ ಮಾತ್ರ ಟಿಕೇಟ್ ಖಚಿತ ಎನ್ನಲಾಗುತ್ತಿದೆ.

ಕೇಂದ್ರದಿಂದ ಆಗಮಿಸುವ 55 ಮಂದಿ ನಾಯಕರ ತಂಡಕ್ಕೆ ಒಬ್ಬರಿಗೆ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿದೆ ಎನ್ನಲಾಗಿದ್ದು, ಇವರುಗಳು ತಮಗೆ ನಿಗದಿಪಡಿಸಲಾದ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷದ ಗೆಲುವಿನ ಸ್ಥಿತಿಗತಿ, ಆಕಾಂಕ್ಷಿ ಅಭ್ಯರ್ಥಿಯ ಜನಬೆಂಬಲ, ಪ್ರತಿಸ್ಪರ್ಧಿ ಅಭ್ಯರ್ಥಿಗಳ ಸಾಮರ್ಥ್ಯವನ್ನು ಅರಿಯಲಿದ್ದು, ಬಳಿಕ ಸಂಪೂರ್ಣ ವರದಿಯನ್ನು ಅಮಿತ್ ಷಾ ಅವರಿಗೆ ನೀಡಲಿದ್ದಾರೆನ್ನಲಾಗಿದೆ.

ಅಲ್ಲದೇ ಈ ಹಿಂದೆ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಅಮಿತ್ ಷಾ ನೀಡಿದ್ದ ಕೆಲ ಸಲಹೆ, ಸೂಚನೆಗಳನ್ನು ಎಷ್ಟರಮಟ್ಟಿಗೆ ಪಾಲಿಸಲಾಗಿದೆ ಎಂಬುದನ್ನೂ ಕೇಂದ್ರ ತಂಡ ಪರಿಶೀಲನೆ ನಡೆಸಲಿದೆ. ಬಿಜೆಪಿ ರಾಜ್ಯ ಘಟಕ, ಅಭ್ಯರ್ಥಿಗಳ ಆಯ್ಕೆ ಕುರಿತು ಏನೇ ಪಟ್ಟಿ ನೀಡಿದರೂ ಅಂತಿಮ ಆಯ್ಕೆ ಅಮಿತ್ ಷಾ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿರುವ ಕಾರಣ ಅವರ ಸೂಚನೆ ಮೇರೆಗೆ ರಾಜ್ಯಕ್ಕೆ ಆಗಮಿಸುತ್ತಿರುವ ತಂಡ ನೀಡುವ ವರದಿ ಆಧಾರದ ಮೇಲೆಯೇ ಅಭ್ಯರ್ಥಿಗಳ ಆಯ್ಕೆಯಾಗಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...