alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರ ರಚನೆಗೆ ಬಿ.ಜೆ.ಪಿ.ಯಿಂದ ಮಾಸ್ಟರ್ ಪ್ಲಾನ್

ಬೆಂಗಳೂರು: ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ, ಅಧಿಕಾರ ಹಿಡಿಯಲು ಕೂದಲೆಳೆ ಅಂತರದಲ್ಲಿರುವ ಬಿ.ಜೆ.ಪಿ. ಸರ್ಕಾರ ರಚನೆಗೆ ಮಾಸ್ಟರ್ ಪ್ಲಾನ್ ಮಾಡಿದೆ.

ಸರಳ ಬಹುಮತವಿಲ್ಲದ ಕಾರಣ, ಬಿ.ಜೆ.ಪಿ.ಗೆ ಹಿನ್ನಡೆಯಾಗಿದೆ. ದೊಡ್ಡ ಪಕ್ಷವಾಗಿರುವ ತಮಗೆ ಸರ್ಕಾರ ರಚನೆಗೆ ಅವಕಾಶ ನೀಡಿದಲ್ಲಿ ವಾರದೊಳಗೆ ಬಹುಮತ ಸಾಬೀತುಪಡಿಸುವುದಾಗಿ ಬಿ.ಜೆ.ಪಿ. ನಾಯಕರು ಹೇಳುತ್ತಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿರುವ ಬಿ.ಜೆ.ಪಿ. ನಿಯೋಗ ಇದನ್ನೇ ಮನವರಿಕೆ ಮಾಡಿಕೊಟ್ಟಿದೆ.

ಜೆ.ಡಿ.ಎಸ್. –ಕಾಂಗ್ರೆಸ್ ಮೈತ್ರಿಕೂಟಕ್ಕೆ 117 ಶಾಸಕರ ಬೆಂಬಲ ಇದೆ. ಪ್ರಸ್ತುತ ಸರಳ ಬಹುಮತಕ್ಕೆ 112 ಶಾಸಕರ ಬೆಂಬಲ ಬೇಕಿದ್ದು, ಬಿ.ಜೆ.ಪಿ. ಹೇಗೆ ಬಹುಮತವನ್ನು ಸಾಬೀತುಪಡಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬಿ.ಜೆ.ಪಿ. ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಬಿ.ಜೆ.ಪಿ. ನಾಯಕರು ಸರಣಿ ಸಭೆ ನಡೆಸಿದ್ದು, ರಾಜ್ಯಪಾಲರ ಭೇಟಿ ಮಾಡಿ ಸರ್ಕಾರ ರಚನೆಗೆ ಆಹ್ವಾನ ನೀಡಲು ಕೋರಿದ್ದಾರೆ. ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...