alex Certify
ಕನ್ನಡ ದುನಿಯಾ       Mobile App
       

Kannada Duniya

ಯಡಿಯೂರಪ್ಪನವರ ‘ಆಪರೇಷನ್ ಕಮಲ’ ಕ್ಕೆ ಹಿನ್ನಡೆ

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಬಿಜೆಪಿಯತ್ತ ಸೆಳೆಯುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ತಂತ್ರಕ್ಕೆ ಮತ್ತೆ ಹಿನ್ನಡೆಯುಂಟಾಗಿದೆ ಎನ್ನಲಾಗಿದೆ. ಯಡಿಯೂರಪ್ಪನವರ ತಂತ್ರಗಾರಿಕೆಗೆ ಕೆಲ ನಾಯಕರು ಮಾತ್ರ ಸಾಥ್ ನೀಡುತ್ತಿದ್ದು, ಉಳಿದ ಪ್ರಮುಖ ಬಿಜೆಪಿ ನಾಯಕರೇ ಬೆಂಬಲ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

ರೇಣುಕಾಚಾರ್ಯ, ಹಾಲಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಯಡಿಯೂರಪ್ಪನವರ ಪರ ಇರುವ ಗುಂಪು ಬಿಟ್ಟರೆ ಬೇರೆ ಯಾವ ನಾಯಕರೂ ಆಪರೇಷನ್ ಕಮಲ ಯಶಸ್ವಿಗೊಳಿಸಲು ಅಷ್ಟಾಗಿ ಗಂಭೀರ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ. ಇನ್ನು ಲಿಂಗಾಯತ ಸಮುದಾಯದ ನಾಯಕರು ಮತ್ತು ಶ್ರೀರಾಮುಲು ಹೊರತುಪಡಿಸಿದರೆ ಉಳಿದೆಲ್ಲ ನಾಯಕರು ಯಡಿಯೂರಪ್ಪನವರಿಗೆ ಸಾಥ್ ಕೊಡುತ್ತಿಲ್ಲ.

ವಿಶೇಷವಾಗಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ ಕೂಡ ಆಪರೇಷನ್ ಕಮಲಕ್ಕೆ ಉತ್ಸುಕರಾಗಿಲ್ಲ. ಈ ನಿಟ್ಟಿನಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರುವುದು ಸ್ವತಃ ಕಮಲ ಪಾಳಯದ ಕೆಲ ನಾಯಕರಿಗೆ ಇಷ್ಟವಿಲ್ಲ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ವಪಕ್ಷದ ನಾಯಕರಲ್ಲೇ ಅಸಮಾಧಾನ ಹೊಗೆಯಾಡತೊಡಗಿದೆ.

ಇನ್ನೊಂದೆಡೆ ಆರ್.ಎಸ್.ಎಸ್. ಕೂಡ ಆಪರೇಷನ್ ಕಮಲ ನಡೆಸಲು ಒಪ್ಪಿಗೆ ಸೂಚಿಸುತ್ತಿಲ್ಲ. ಒಂದು ವೇಳೆ ಆಪರೇಷನ್ ಕಮಲಕ್ಕೆ ಕೈಹಾಕಿದರೂ ಎಡವಟ್ಟಾಗುವ ಸಾಧ್ಯತೆಯಿದ್ದು, ಒಂದೊಮ್ಮೆ ವಿಫಲವಾದರೆ ಅದು ಲೋಕಸಭಾ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂಬ ಅಭಿಪ್ರಾಯ ತಿಳಿಸಿದೆ. ಈ ಕಾರಣದಿಂದ ಯಡಿಯೂರಪ್ಪನವರ ಆಪರೇಷನ್ ಕಮಲ ಕಾರ್ಯಾಚರಣೆ ತಂತ್ರ ವಿಫಲವಾದಂತೆ ತೋರುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...