alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿ.ಜೆ.ಪಿ. ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರು’

ಬೆಂಗಳೂರು: ಜೆ.ಡಿ.ಎಸ್. ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದೆ. ಇದೇ ವೇಳೆ ಸರ್ಕಾರ ರಚನೆಗೆ ಮುಂದಾಗಿರುವ ಬಿ.ಜೆ.ಪಿ. ಕಾರ್ಯತಂತ್ರ ರೂಪಿಸಿದ್ದು, ಸರಳ ಬಹುಮತಕ್ಕಾಗಿ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದೆ.

ಈ ಕುರಿತಾಗಿ ಮಾಹಿತಿ ನೀಡಿದ ಬಿ.ಜೆ.ಪಿ. ನಾಯಕ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ –ಜೆ.ಡಿ.ಎಸ್. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲು ಆಯಾ ಪಕ್ಷದ ಅನೇಕ ಶಾಸಕರಿಗೆ ಇಷ್ಟವಿಲ್ಲ. ಅನೇಕ ಶಾಸಕರು ನಮ್ಮನ್ನು ಸಂಪರ್ಕಿಸಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಬಿ.ಜೆ.ಪಿ. ಸರ್ಕಾರ ರಚನೆಗೆ ಅನೇಕ ಶಾಸಕರು ಬೆಂಬಲ ನೀಡಿದ್ದು, ಅವರು ಯಾರು ಎನ್ನುವುದನ್ನು ಬಹಿರಂಗಪಡಿಸುವುದಿಲ್ಲ. ಆದರೆ, ಕಾಂಗ್ರೆಸ್ –ಜೆ.ಡಿ.ಎಸ್. ಮೈತ್ರಿ ಬಗ್ಗೆ ಅಸಮಾಧಾನಗೊಂಡ ಶಾಸಕರು ಬಿ.ಜೆ.ಪಿ. ಸಂಪರ್ಕಿಸಿದ್ದಾರೆ. ಅವರಾಗಿಯೇ ಬಂದಿದ್ದಾರೆ. ನಾವು ಯಾರನ್ನೂ ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...