alex Certify
ಕನ್ನಡ ದುನಿಯಾ       Mobile App
       

Kannada Duniya

ಕುತೂಹಲಕ್ಕೆ ಕಾರಣವಾಗಿದೆ ಶಾಸಕ ಆನಂದ್ ಸಿಂಗ್ ನಡೆ

ತಾವು ಹಾಲಿ ಶಾಸಕರಾಗಿದ್ದರೂ ತಮ್ಮ ಕ್ಷೇತ್ರದಲ್ಲಿ ಕೆಲವರು ಬಿಜೆಪಿ ಟಿಕೇಟ್ ಆಕಾಂಕ್ಷಿಗಳೆಂದು ಹೇಳಿಕೊಂಡು ಪ್ರಚಾರ ನಡೆಸುತ್ತಿರುವುದರ ಕುರಿತು ಅಸಮಾಧಾನಗೊಂಡಿರುವ ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್, ವರಿಷ್ಟರಿಗೆ ಈ ಕುರಿತು ಮಾಹಿತಿ ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನಲೆಯಲ್ಲಿ ಶನಿವಾರದಂದು ಹೊಸಪೇಟೆಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಗೆ ಗೈರು ಹಾಜರಾಗುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಶಾಸಕ ಆನಂದ್ ಸಿಂಗ್ ರ ಮನವೊಲಿಸಲು ಸತತ ಯತ್ನ ನಡೆಸಲಾಯಿತಾದರೂ ಅವರು ಮಣಿದಿಲ್ಲವೆನ್ನಲಾಗಿದ್ದು, ಶಾಸಕರ ಬೆಂಬಲಿಗರೂ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬೇರೊಂದು ದಿನ ಕಾರ್ಯಕ್ರಮ ಆಯೋಜಿಸಲು ಆನಂದ್ ಸಿಂಗ್ ತಿಳಿಸಿದ್ದರು. ಮುಂದಿನ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.

ಆದರೆ ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳು ಶಾಸಕ ಆನಂದ್ ಸಿಂಗ್ ರ ಅಸಮಾಧಾನಕ್ಕೆ ಕಾರಣವೆನ್ನಲಾಗಿದ್ದು, ಇದಕ್ಕೆ ಪಕ್ಷದ ಕೆಲ ನಾಯಕರೂ ಕುಮ್ಮಕ್ಕು ನೀಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಾದ ಟಿಪ್ಪು ಜಯಂತಿಯಲ್ಲಿ ಬಿಜೆಪಿ ಜನ ಪ್ರತಿನಿಧಿಗಳು ಪಾಲ್ಗೊಳ್ಳಬಾರದೆಂದು ವರಿಷ್ಟರು ಸೂಚನೆ ನೀಡಿದ್ದರೂ ಇದಕ್ಕೆ ಮನ್ನಣೆ ನೀಡದೆ ಆನಂದ್ ಸಿಂಗ್ ಪಾಲ್ಗೊಂಡಿದ್ದರು. ಇದೀಗ ತಮ್ಮ ಕ್ಷೇತ್ರದಲ್ಲಿ ನಡೆದ ಪರಿವರ್ತನೆ ಯಾತ್ರೆಗೆ ಗೈರು ಹಾಜರಾಗುವ ಮೂಲಕ ಹಲವು ಊಹಾಪೋಹಕ್ಕೆ ಕಾರಣರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...