alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಿಂಗ್! ಬಿ.ಜೆ.ಪಿ. ಮೀಟಿಂಗ್ ಗೆ ಬಂದ ನಾಗರಹಾವು

ಬೆಂಗಳೂರು: ಬೆಂಗಳೂರು ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ರೆಸಾರ್ಟ್ ನಲ್ಲಿ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

ಸಭಾಂಗಣದ ಪಕ್ಕದ ಕೊಠಡಿಯಲ್ಲೇ ನಾಗರ ಹಾವೊಂದು ಕಾಣಿಸಿಕೊಂಡಿದೆ. ಅಮಿತ್ ಶಾ ಅವರ ಆಗಮನಕ್ಕೂ ಮೊದಲೇ ಕೊಠಡಿಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ರೆಸಾರ್ಟ್ ಸಿಬ್ಬಂದಿ ಹಾವು ಹಿಡಿಯುವವರನ್ನು ಕರೆಸಿ ಅದನ್ನು ಹಿಡಿಸಿ ಚೀಲದಲ್ಲಿ ಬಂಧಿಸಿಟ್ಟಿದ್ದಾರೆ.

ಅಮಿತ್ ಶಾ ಅವರು ಆಗಮಿಸಿ, ಸಭೆ ಆರಂಭಿಸಿದ ಬಳಿಕ ಚೀಲದಲ್ಲಿದ್ದ ನಾಗರಹಾವನ್ನು ಪಕ್ಕದ ಹೂಳು ತುಂಬಿದ ಕೆರೆಗೆ ಬಿಡಲಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಂದಿನ ಸಭೆ ನಡೆಸಲಾಗಿದೆ. ಇದೇ ವೇಳೆ ನಾಗರಹಾವು ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇದರಿಂದ ಪರಿಣಾಮ ಬೀರಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಆದರೆ, ಹಾವು ಬಿ.ಜೆ.ಪಿ. ನಾಯಕರಿಗೆ ದರ್ಶನ ನೀಡಿಲ್ಲ. ನಾಯಕರು ಬರುವ ಮೊದಲೇ ಅದನ್ನು ಸೆರೆ ಹಿಡಿಯಲಾಗಿದೆ. ಇದರಿಂದ ಏನೂ ಆಗದಿರಬಹುದೆಂದು ಹೇಳಲಾಗ್ತಿದೆ. ಒಟ್ಟಿನಲ್ಲಿ ಬಿ.ಜೆ.ಪಿ. ಸಭೆ ನಡೆಯುವ ಸ್ಥಳದಲ್ಲಿ ನಾಗರಹಾವು ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...