alex Certify
ಕನ್ನಡ ದುನಿಯಾ       Mobile App
       

Kannada Duniya

ನೀರು ಕೇಳಿದ ರೈತನ ಮೇಲೆ ದರ್ಪ

madayi-bjp

ಗದಗ: ನೀರು ಕೇಳಿದ ರೈತನನ್ನು ಸಭೆಯಿಂದ ಹೊರ ಕಳಿಸಿದ ಘಟನೆ ಗದಗದಲ್ಲಿ ನಡೆದಿದೆ. ರಾಜ್ಯ ಬಿ.ಜೆ.ಪಿ.ಯಿಂದ ಬರ ವೀಕ್ಷಣೆ ಪ್ರವಾಸ ಕೈಗೊಂಡಿದ್ದು, ಇದೇ ವೇಳೆ ಗದಗದ ಅಂಬೇಡ್ಕರ್ ಭವನದಲ್ಲಿ ಪಕ್ಷದ ಸಮಾವೇಶ ಆಯೋಜಿಸಲಾಗಿದೆ.

ಸಭೆಯಲ್ಲಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡುತ್ತಿದ್ದ ಸಂದರ್ಭದಲ್ಲಿ ರೈತರೊಬ್ಬರು ಎದ್ದು ನಿಂತು, ಮಹಾದಾಯಿ ಯೋಜನೆಗಾಗಿ ಈ ಭಾಗದ ರೈತರು ವರ್ಷಗಳಿಂದ ಹೋರಾಟ ನಡೆಸಿದ್ದು, ನೀವು ಅದರ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದ್ದಾರೆ.

ಆಗ ವೇದಿಕೆಯಿಂದ ಕೆಳಗಿಳಿದು ಬಂದ ಮಾಜಿ ಸಚಿವ ಕಳಕಪ್ಪ ಬಂಡಿ ರೈತನನ್ನು ಸಭೆಯಿಂದ ಹೊರಗೆ ಕಳುಹಿಸಿದ್ದಾರೆ. ಆ ರೈತನಿಗೆ ಬೆಂಬಲ ನೀಡಿದ ವ್ಯಕ್ತಿಗೆ ಸುಮ್ಮನಿರುವಂತೆ ಕೈ ತೋರಿಸಿದ್ದಾರೆ.

ಈ ನಡುವೆ ನರಗುಂದದಲ್ಲಿ ಯಡಿಯೂರಪ್ಪ ಆಗಮನ ವಿರೋಧಿಸಿ ಮಹಾದಾಯಿ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ನರಗುಂದದ ಗಾಂಧಿ ವೃತ್ತದಲ್ಲಿ ರೈತರು ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಬಿಗಿಭದ್ರತೆ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...