alex Certify
ಕನ್ನಡ ದುನಿಯಾ       Mobile App
       

Kannada Duniya

ಬಿ.ಜೆ.ಪಿ.ಯಲ್ಲಿ ಮತ್ತೆ ಭಿನ್ನಮತ ಸ್ಪೋಟ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿ.ಜೆ.ಪಿ. ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ. ಆದರೆ, ರಾಜ್ಯ ಬಿ.ಜೆ.ಪಿ.ಯಲ್ಲಿ ಮತ್ತೆ ಭಿನ್ನಮತ ಸ್ಪೋಟಗೊಂಡಿದೆ.

ಬಿ.ಜೆ.ಪಿ. ಪ್ರಚಾರ ಸಮಿತಿ ಉಸ್ತುವಾರಿ ವಿಚಾರದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬಿ.ಜೆ.ಪಿ. ರಾಜ್ಯ ಉಸ್ತುವಾರಿಯ ಜೊತೆಗೆ ಚುನಾವಣೆಯ ಉಸ್ತುವಾರಿಗಳಾಗಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ ಪಿಯೂಶ್ ಗೋಯೆಲ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇಮಕ ಮಾಡಿದ್ದು, ಇದರೊಂದಿಗೆ ಪ್ರಚಾರ ಸಮಿತಿಗಳನ್ನು ರಚಿಸಿದ್ದಾರೆ.

ಸಾಂಪ್ರದಾಯಿಕ ಪ್ರಚಾರ ಸಮಿತಿಗೆ ಡಿ.ವಿ. ಸದಾನಂದಗೌಡರನ್ನು ಅಧ್ಯಕ್ಷರಾಗಿ ನೇಮಿಸಿದ್ದು, ಇದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರಾಗಿರುವ ಸದಾನಂದಗೌಡರನ್ನು ಬದಲಿಸಬೇಕೆಂದು ಪ್ರಕಾಶ್ ಜಾವಡೇಕರ್ ಅವರಿಗೆ ಒತ್ತಡ ಹಾಕಿದ್ದರೆ. ಅಲ್ಲದೇ ಸಮಿತಿಯಲ್ಲಿರುವ ರವೀಂದ್ರನಾಥ್, ಸೊಗಡು ಶಿವಣ್ಣ, ನಂದೀಶ್ ಅವರ ಬದಲಾವಣೆಗೂ ಒತ್ತಡ ಹೇರಿದ್ದರೆನ್ನಲಾಗಿದೆ.

ಈ ಹಿನ್ನಲೆಯಲ್ಲಿ ಪ್ರಚಾರ ಸಮಿತಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪುನರ್ ರಚಿಸಿದ್ದು, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ತಮ್ಮ ಬಳಿಯಲ್ಲೇ ಉಳಿಸಿಕೊಂಡು, ಶೋಭಾ ಕರಂದ್ಲಾಜೆ ಅವರನ್ನು 2 ನೇ ಸ್ಥಾನದಲ್ಲಿ ಸಂಚಾಲಕರಾಗಿ ನೇಮಿಸಿದ್ದಾರೆ. ಈ ಪಟ್ಟಿಯಲ್ಲಿ ಸದಸ್ಯರಾಗಿ 4 ನೇ ಸ್ಥಾನದಲ್ಲಿ ಸದಾನಂದಗೌಡರನ್ನು ನೇಮಿಸಿದ್ದು, ಈ ಬೆಳವಣಿಗೆಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...