alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರ್ಯಕರ್ತನ ಕರೆಗೆ ಓಗೊಟ್ಟ ಬಿ.ಎಸ್.ವೈ–ಈಶ್ವರಪ್ಪ

bsy-kse-s

ತುಮಕೂರು: ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಜನತೆಗೆ ತಿಳಿಸುವ ಜೊತೆಗೆ ಪಕ್ಷ ಸಂಘಟನೆಗೆ ಒತ್ತು ನೀಡಲು ರಾಜ್ಯ ಬಿ.ಜೆ.ಪಿ. ಇಂದಿನಿಂದ ಜನಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ.

ಬೆಳಿಗ್ಗೆ ತುಮಕೂರಿನಲ್ಲಿ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ಅಭಿಯಾನ ಆರಂಭಿಸಿದ ನಾಯಕರು ಗುಬ್ಬಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಅನಂತ್ ಕುಮಾರ್, ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮೊದಲಾದವರು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ವೇದಿಕೆ ಬಳಿ ಬಂದ ಕಾರ್ಯಕರ್ತರೊಬ್ಬರು, ಯಡಿಯೂರಪ್ಪ ಮತ್ತು ಈಶ್ವರಪ್ಪ ಒಂದಾಗಬೇಕು ಎಂದು ಕೂಗಿದ್ದಾರೆ. ಆತನಿಗೆ ಅಲ್ಲಿದ್ದ ಕೆಲವರು ಸಾಥ್ ನೀಡಿದ್ದು, ಇಬ್ಬರೂ ನಾಯಕರು ಒಂದಾಗಬೇಕೆಂದು ಒತ್ತಾಯಿಸಿದ್ದಾರೆ.

ಒಟ್ಟಿಗೆ ಕುಳಿತಿದ್ದ ಯಡಿಯೂರಪ್ಪ ಮತ್ತು ಈಶ್ವರಪ್ಪ ಕಾರ್ಯಕರ್ತರ ಕರೆಗೆ ಸ್ಪಂದಿಸಿದ್ದು, ಇಬ್ಬರೂ ಎದ್ದು ನಿಂತು ಪರಸ್ಪರ ಕೈ ಹಿಡಿದುಕೊಂಡಿದ್ದಾರೆ. ಈ ಮೂಲಕ ನಾವು ಒಂದಾಗಿದ್ದೇವೆ ಎಂದು ಸಾರಿ ಹೇಳಿ, ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆಗ ಕಾರ್ಯಕರ್ತರು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...