alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ತಡೇ ಪಾರ್ಟಿಗೆ ಬಂದು ಅನುಚಿತವಾಗಿ ವರ್ತಿಸಿದ್ರು….

ಉಡುಪಿ: ಕೋಡಿಬೇಂಗ್ರೆ ಬೀಚ್ ಬಳಿ ಅನುಚಿತವಾಗಿ ವರ್ತಿಸಿದ ಮೂವರು ಯುವಕರು ಹಾಗೂ ಮೂವರು ಯುವತಿಯರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೇರೆ ಬೇರೆ ಸಮುದಾಯಕ್ಕೆ ಸೇರಿದ ಯುವಕರು ಹಾಗೂ ಯುವತಿಯರು, ಯುವತಿಯೊಬ್ಬಳ ಹುಟ್ಟುಹಬ್ಬ ಆಚರಿಸಲು ಮಲ್ಪೆ ಸಮೀಪದ ಕೋಡಿಬೇಂಗ್ರೆ ಬೀಚ್ ಗೆ ಬಂದಿದ್ದಾರೆ.

ಜನ ಕಡಿಮೆ ಇದ್ದ ಸ್ಥಳದಲ್ಲಿ ಸೇರಿದ್ದ ಯುವಕರು, ಯುವತಿಯರು ಅತಿ ಸಲುಗೆಯಿಂದ ಅನುಚಿತವಾಗಿ ವರ್ತಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಬುದ್ಧಿಮಾತು ಹೇಳಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಯುವಕರು, ಯುವತಿಯರನ್ನು ಠಾಣೆಗೆ ಕರೆದೊಯ್ದು, ಪೋಷಕರನ್ನು ಕರೆಸಿ ಅವರೊಂದಿಗೆ ಕಳಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...