alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ಗಳಿಂದ ಪೆಟ್ರೋಲ್ ಕದಿಯುವಾಗಲೇ ಸಿಕ್ಕಿ ಬಿದ್ದವನಿಗೆ ಹಿಗ್ಗಾಮುಗ್ಗಾ ಗೂಸಾ

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಂದ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬ ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಗದಗದಲ್ಲಿ ನಡೆದಿದೆ.

ಗದಗದ ತೋಂಟದಾರ್ಯ ಮಠದ ಸ್ಟೇಷನ್ ರಸ್ತೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಂದ ಹಲವು ದಿನಗಳಿಂದ ಪೆಟ್ರೋಲ್ ಕಳವು ಮಾಡುತ್ತಿರುವ ಸಂಗತಿ ನಿವಾಸಿಗಳ ಗಮನಕ್ಕೆ ಬಂದಿತ್ತು. ಇದರಿಂದ ಬೇಸತ್ತಿದ್ದ ಯುವಕರ ಗುಂಪೊಂದು ಕಳೆದ ರಾತ್ರಿ ಕಳ್ಳನನ್ನು ಹಿಡಿಯುವ ಸಲುವಾಗಿ ಕಾದು ಕುಳಿತಿದ್ದರು.

ಈ ವೇಳೆ ಕರಿಯಪ್ಪ ಎಂಬಾತ ಪೆಟ್ರೋಲ್ ಕದಿಯಲು ಬಂದಿದ್ದು, ಆತ ಪೆಟ್ರೋಲ್ ತೆಗೆಯುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯ ಯುವಕರು ಬಳಿಕ ಶಹರ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...