alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಲ್ ಎನ್ ಫೀಲ್ಡ್ ಗ್ರಾಹಕನಿಗೆ ಸಿಕ್ತು ನ್ಯಾಯ

ro-bik-nm

ಕೋಲಾರ: ರಾಯಲ್ ಎನ್ ಫೀಲ್ಡ್ ಬೈಕ್ ಖರೀದಿಸಿದ್ದ ಗ್ರಾಹಕರೊಬ್ಬರಿಗೆ ಕೋರ್ಟ್ ನೀಡಿರುವ ಆದೇಶದಿಂದ ಕೊನೆಗೂ ನ್ಯಾಯ ಸಿಕ್ಕಿದೆ.

ಕೋಲಾರ ಜಿಲ್ಲೆಯ ಟೆಕ್ಕಿ ಪುನೀತ್ ಅವರು 2016 ರ ಜೂನ್ 1 ರಂದು ರಾಯಲ್ ಎನ್ ಫೀಲ್ಡ್ ನ ಹಿಮಾಲಯನ್ ಮಾಡೆಲ್ ಬೈಕ್ ಖರೀದಿಸಿದ್ದರು.

ಆದರೆ, ಮೊದಲ ದಿನವೇ ಎಂಜಿನ್ ನಲ್ಲಿ ದೋಷ ಕಂಡು ಬಂದಿತ್ತು. 3 ನೇ ದಿನಕ್ಕೆ ಫ್ಯೂಸ್ ಹೋದರೆ, 6 ನೇ ದಿನಕ್ಕೆ ವೈರಿಂಗ್ ಸುಟ್ಟು ಹೋಗಿತ್ತು. ಸ್ಯಾರಿ ಗಾರ್ಡ್ ಕಳಚಿ ಬಿದ್ದಿತ್ತು.

ಇದರೊಂದಿಗೆ ಬೈಕ್ ನಲ್ಲಿ ಗುಣಮಟ್ಟ ಸರಿ ಇಲ್ಲದ ಬಿಡಿಭಾಗಗಳನ್ನು ಬಳಸಿರುವುದು ಗಮನಕ್ಕೆ ಬಂದಿದೆ. ಪುನೀತ್ ಬೈಕ್ ಖರೀದಿಸಿದ್ದ ಶೋ ರೂಂ ಮತ್ತು ಕಂಪನಿಗೆ ಹಲವು ಬಾರಿ ಮನವಿ ಮಾಡಿದ್ದರೂ, ಸ್ಪಂದನೆ ವ್ಯಕ್ತವಾಗದ ಕಾರಣ ಗ್ರಾಹಕರ ವೇದಿಕೆಗೆ ದೂರು ನೀಡಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ, ಬೈಕ್ ಹಿಂಪಡೆದು, ಪೂರ್ಣ ಹಣವನ್ನು ಪಾವತಿಸಬೇಕು. ಜೊತೆಗೆ ದಂಡವನ್ನು ಕಟ್ಟಬೇಕೆಂದು ಆದೇಶಿಸಿದೆ.

ಇದರಿಂದ ಪುನೀತ್ ಅವರಿಗೆ ನ್ಯಾಯ ಸಿಕ್ಕಂತಾಗಿದೆ. ಆದರೆ, ಅವರಿಗೆ ಇದೇ ಕಾರಣಕ್ಕೆ ಬೆದರಿಕೆ ಕರೆಗಳು ಬರತೊಡಗಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...