alex Certify
ಕನ್ನಡ ದುನಿಯಾ       Mobile App
       

Kannada Duniya

ಶವದ ಜೊತೆಗೆ ಬಾವಿಯಲ್ಲಿದ್ದಳು ಮಹಿಳೆ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮೀರಾಪೂರಹಟ್ಟಿ ಗ್ರಾಮದ ಹೊರ ವಲಯದ ಪಾಳು ಬಾವಿಯೊಂದಕ್ಕೆ ಬೈಕ್ ಸವಾರರು ಬಿದ್ದಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಲಕ್ಕಪ್ಪ ಬೂದಿಹಾಳ ಅಲ್ಲಿಯೇ ಸಾವು ಕಂಡಿದ್ದರೆ ಹಿಂಬದಿಯಲ್ಲಿ ಕುಳಿತಿದ್ದ ಅಕ್ಕವ್ವ ಖೋತ್ ಎಂಬ ಮಹಿಳೆ ಕಾಲಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

130 ಅಡಿ ಅಳದ ಬಾವಿಗೆ ಬೈಕ್ ಬಿದ್ದ ವೇಳೆ ಸನಿಹದಲ್ಲಿ ಯಾರೂ ಇರದ ಕಾರಣ ಹಲವು ಗಂಟೆಗಳ ಕಾಲ ಅಕ್ಕವ್ವ ಖೋತ್, ಲಕ್ಕಪ್ಪ ಬೂದಿಹಾಳನ ಶವದ ಜೊತೆ ಬಾವಿಯೊಳಗೆ ಇದ್ದರೆನ್ನಲಾಗಿದೆ. ಅಕ್ಕವ್ವ ಖೋತ್ ಸಹಾಯಕ್ಕಾಗಿ ಜೋರಾಗಿ ಕಿರುಚಾಟ ನಡೆಸಿದ್ದು, ಇದನ್ನು ಕೇಳಿ ಕೆಲ ಗುರಿಗಾಹಿಗಳು ಗ್ರಾಮಸ್ಥರ ಸಹಕಾರದಿಂದ ಆಕೆಯನ್ನು ರಕ್ಷಿಸಿದ್ದಾರೆ.

ಇಂದು ಬೆಳಿಗ್ಗೆ ಬೈಕ್ ಹಾಗೂ ಲಕ್ಕಪ್ಪ ಬೂದಿಹಾಳನ ಶವ ಹೊರ ತೆಗೆಯಲಾಗಿದ್ದು, ಗಾಯಗೊಂಡಿದ್ದ ಅಕ್ಕವ್ವ ಖೋತ್ ರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...