alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ವಿದ್ಯಾರ್ಥಿನಿ

ಯುವಕನ ಕಿರುಕುಳಕ್ಕೆ ಬೇಸತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ವಿಜಾಪುರ ಜಿಲ್ಲೆಯ  ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ. ಅರಸನಾಳ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವಿತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅದೇ ಗ್ರಾಮದ  ಮಹಂತಯ್ಯ ಬಸಪ್ಪ ಮಠಪತಿ ಎಂಬಾತ ಸಾವಿತ್ರಿಗೆ ಕಿರುಕುಳ ನೀಡುತ್ತಿದ್ದನಂತೆ. ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದನಂತೆ. ಫೋನ್ ನಲ್ಲಿಯೂ ಕಾಟ ಕೊಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸಾವಿತ್ರಿ ತನ್ನ ತಂದೆಗೆ ಹೇಳಿದ್ದಳಂತೆ. ಎರಡು ದಿನಗಳ ಹಿಂದೆ ಮಹಂತಯ್ಯ ಮನೆಗೆ ಹೋಗಿದ್ದ ಸಾವಿತ್ರಿ ತಂದೆ ಮಹಂತಯ್ಯನಿಗೆ ಹಿಂಸೆ ನೀಡದಂತೆ ವಿನಂತಿ ಮಾಡಿದ್ದರಂತೆ.

ಇದೇ ಸಿಟ್ಟಿನಲ್ಲಿದ್ದ ಮಹಂತಯ್ಯ, ತಾಯಿ ಹಾಗೂ ಸಹೋದರಿ ಜೊತೆ ಶುಕ್ರವಾರ ಸಾವಿತ್ರಿ ಮನೆಗೆ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇದ್ರಿಂದ ಬೇಸತ್ತ ಸಾವಿತ್ರಿ ಇಂದು ಬೆಳಿಗ್ಗೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಂತಯ್ಯ ವಿರುದ್ಧ ದೂರು ದಾಖಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...