alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಲೈವ್ ನಲ್ಲೇ ಪ್ರಥಮ್ ಆತ್ಮಹತ್ಯೆ ಯತ್ನ

big-prat

ಬೆಂಗಳೂರು:’ಬಿಗ್ ಬಾಸ್’ ಖ್ಯಾತಿಯ ಪ್ರಥಮ್ ಫೇಸ್ ಬುಕ್ ಲೈವ್ ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಇದಾದ ಬಳಿಕ ನಾಟ್ ರೀಚಬಲ್ ಆಗಿದ್ದಾರೆ.

ಸ್ನೇಹಿತ ಲೋಕೇಶ್ ರೊಂದಿಗೆ ಜಗಳವಾದ ಬಳಿಕ, ಪ್ರಥಮ್ ನೊಂದುಕೊಂಡವರಂತೆ ಮಾತನಾಡಿದ್ದು, ನನಗೆ ತುಂಬಾ ನೋವು ಮಾಡುತ್ತಿದ್ದಾರೆ. ನಾನು ಎಲ್ಲರೊಂದಿಗೆ ಚೆನ್ನಾಗಿಯೇ ಇದ್ದೆ. ಆದರೂ, ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಾ ನಿದ್ದೆ ಮಾತ್ರೆ ಸೇವಿಸಿದ್ದಾರೆ. ಫೇಸ್ ಬುಕ್ ಲೈವ್ ನಲ್ಲೇ ತಮಗಾದ ನೋವು ಹೇಳಿಕೊಳ್ಳುತ್ತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಘಟನೆಯ ಬಳಿಕ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಸ್ನೇಹಿತ ಲೋಕೇಶ್ ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ ಬಳಿಕ ಪ್ರಥಮ್ ಡಿಸ್ಟರ್ಬ್ ಆಗಿದ್ದರು ಎನ್ನಲಾಗಿದೆ.

ಪ್ರಥಮ್ ತನಗೆ ಅವಾಚ್ಯ ಪದಗಳಿಂದ ನಿಂದಿಸಿದ್ದ ಫೋನ್ ಸಂಭಾಷಣೆಯನ್ನು ಲೋಕೇಶ್ ಫೇಸ್ ಬುಕ್ ನಲ್ಲಿ ಹಾಕಿದ್ದು, ಇದೇ ವಿಚಾರಕ್ಕೆ ಇಬ್ಬರ ನಡುವೆ ರಾತ್ರಿ ಜಗಳವಾಗಿದೆ.

ಪ್ರಥಮ್ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಲೋಕೇಶ್ ದೂರು ನೀಡಿದ್ದು, ಇದು ಗೊತ್ತಾಗುತ್ತಲೇ ಪ್ರಥಮ್ ನಿದ್ದೆ ಮಾತ್ರೆ ಸೇವಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...