alex Certify
ಕನ್ನಡ ದುನಿಯಾ       Mobile App
       

Kannada Duniya

ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದ ಮಧು ಬಂಗಾರಪ್ಪ; ಶಾಕ್ ಆದ ಜೆಡಿಎಸ್ ನಾಯಕರು

ಲೋಕಸಭಾ ಚುನಾವಣೆಗೆ ಭಾರೀ ಕಸರತ್ತು ನಡೆಸುತ್ತಿರುವ ಜೆಡಿಎಸ್ ಗೆ ಆರಂಭದಲ್ಲೇ ಶಾಕ್ ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿತ್ತು. ಆದರೆ ಮಧು ಬಂಗಾರಪ್ಪ, ಜಿಲ್ಲೆಯಲ್ಲಿ ಬಿಎಸ್ ವೈ ರನ್ನು ಎದುರಿಸಿ ಗೆಲ್ಲುವುದು ಕಷ್ಟವೆಂದು, ಲೋಕಸಭಾ ಚುನಾವಣಾ ರಂಗದಿಂದಲೇ ಹಿಂದೆ ಸರಿದಿದ್ದಾರೆ.

ಸಿಎಂ ಕುಮಾರಸ್ವಾಮಿಯವರು ಶಿವಮೊಗ್ಗದಲ್ಲಿ ಬಿಎಸ್‍ವೈ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಗಾಗಿ ಭಾರೀ ಸರ್ಕಸ್ ನಡೆಸಿ, ಮಧು ಬಂಗಾರಪ್ಪನವರನ್ನು ಅಖಾಡಕ್ಕಿಳಿಸಲು ಮುಂದಾಗಿದ್ದರು. ಆದರೆ ಮಧು ಬಂಗಾರಪ್ಪ ಯುದ್ಧಕ್ಕೆ ಮೊದಲೆ ಶಸ್ತ್ರತ್ಯಾಗ ಮಾಡಿದಂತೆ ಲೋಕಸಭಾ ಚುನಾವಣೆ ಕಣದಿಂದಲೇ ಹಿಂದೆ ಸರಿಯುವ ಮೂಲಕ ಸಿಎಂಗೆ ಶಾಕ್ ನೀಡಿದ್ದಾರೆ.

ಈಗ ಜಿಲ್ಲೆಯಿಂದ ಮತ್ತೊಬ್ಬ ಸ್ಟ್ರಾಂಗ್ ಅಭ್ಯರ್ಥಿ ಹುಡುಕುತ್ತಿರುವ ಜೆಡಿಎಸ್, ಗೀತಾ ಶಿವರಾಜಕುಮಾರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಆದರೆ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಗೀತಾ ಶಿವರಾಜಕುಮಾರ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...