alex Certify
ಕನ್ನಡ ದುನಿಯಾ       Mobile App
       

Kannada Duniya

ರೈತಾಪಿ ವರ್ಗ ಆಚರಿಸುವ ಭೂಮಿ ಹುಣ್ಣಿಮೆ ವಿಶೇಷತೆಯೇನು?

bhumi

ಅನ್ನ ಕೊಡುವ ಭೂಮಿ ತಾಯಿಯನ್ನು ಪೂಜಿಸುವ ಹಬ್ಬವೇ ಭೂಮಿ ಹುಣ್ಣಿಮೆ. ಭೂಮಿ ತಾಯಿ ಬಯಕೆಯನ್ನು ತೀರಿಸುವ ವಿಶೇಷ ಆಚರಣೆ ಇದಾಗಿದೆ.

ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಮಣ್ಣಿನ ಎತ್ತಿನ ಮೂರ್ತಿಗಳನ್ನು ತಯಾರಿಸಿ, ಭೂಮಿ ತಾಯಿಯೊಂದಿಗೆ ಪೂಜಿಸಲಾಗುತ್ತದೆ.

ಗರ್ಭಿಣಿಯಾದ ಭೂಮಿಯ ಬಯಕೆಯನ್ನು ತೀರಿಸಲು ರೈತಾಪಿ ವರ್ಗ ಕೆಲ ದಿನಗಳಿಂದಲೇ ಸಜ್ಜಾಗುತ್ತದೆ. ಗಾಡಿ, ಕೃಷಿ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳು ವಿವಿಧ ರೀತಿಯ ಅಡುಗೆ ಮಾಡುತ್ತಾರೆ.

ಎಲ್ಲರೂ ಒಂದಾಗಿ ಜಮೀನು, ಗದ್ದೆ, ತೋಟಗಳಿಗೆ ತೆರಳಿ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಹೊಸ ಸೀರೆ, ಒಡವೆ ಹಾಕಿ, ವಿಶೇಷ ಖಾದ್ಯ ಇಟ್ಟು ನೈವೇದ್ಯ ಮಾಡುತ್ತಾರೆ. ಬಳಿಕ ಮನೆ ಮಂದಿಯೆಲ್ಲಾ ಊಟ ಮಾಡುತ್ತಾರೆ. ನಂತರ ಜಮೀನಿಗೆ ಚರಗ ಹಾಕುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...