alex Certify
ಕನ್ನಡ ದುನಿಯಾ       Mobile App
       

Kannada Duniya

ಸಡಗರ ಸಂಭ್ರಮದಿಂದ ಭೂಮಿ ಹುಣ್ಣಿಮೆ ಆಚರಣೆ

ಭೂಮಿ ಹುಣ್ಣಿಮೆಯನ್ನು ರೈತರು ಇಂದು ಸಡಗರ ಸಂಭ್ರಮದಿಂದ ತಮ್ಮ ತಮ್ಮ ಹೊಲ, ಗದ್ದೆ, ತೋಟಗಳಲ್ಲಿ ಆಚರಿಸಿದ್ದಾರೆ.

ಬೆಳಗ್ಗಿನಿಂದಲೇ ಪೂಜೆಯ ಸಡಗರದಲ್ಲಿದ್ದ ಮಹಿಳೆಯರು ಮನೆಯಲ್ಲಿ ವಿಶೇಷ ಅಡುಗೆ ತಿನಿಸುಗಳನ್ನು ಮಾಡಿಕೊಂಡು ಎತ್ತಿನ ಗಾಡಿ, ಟ್ರ್ಯಾಕ್ಟರ್ ಮುಂತಾದ ವಾಹನಗಳ ಮೂಲಕ ತಮ್ಮ ಜಮೀನುಗಳಿಗೆ ತೆರಳಿ ಅಡಿಕೆ ಮರ ಅಥವಾ ಇತರ ಮರಗಳಿಗೆ ಸೀರೆ, ಕುಪ್ಪಸ, ತಾಳಿ ತೊಡಿಸಿ, ಚಪ್ಪರ ಹಾಕಿ ವಿಶೇಷ ಅಲಂಕಾರ ಮಾಡಿ, ಶ್ರದ್ಧಾ ಭಕ್ತಿಯಿಂದ ಪೂಜಿಸಿದರು.

ಭೂಮಿಹುಣ್ಣಿಮೆ ವಿಶೇಷ ಹಬ್ಬವಾಗಿದೆ. ರೈತ ಮಹಿಳೆಯರಿಗೆಲ್ಲಾ ತಮಗೆ ಅನ್ನ ನೀಡುವ, ಬದುಕು ಕೊಡುವ ಈ ಭೂಮಿಗೆ ಪೂಜೆ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಭಾವವಿದೆ. ಅಲ್ಲದೆ ಈ ಸಂದರ್ಭದಲ್ಲಿ ಗರ್ಭಿಣಿಯಾದ ಭೂಮಿತಾಯಿ ಬಯಕೆಯನ್ನ ತೀರಿಸಬೇಕು ಎಂಬ ನಂಬಿಕೆ ಕೂಡ ಇದೆ. ಹಲವು ಕಡೆ ಭೂಮಿ ಹುಣ್ಣಿಮೆಯನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸಿದರೂ ಕೂಡ ಒಟ್ಟಾರೆ ಆಶಯ ಒಂದೇ ಆಗಿದೆ.

ಮಲೆನಾಡು ಭಾಗಗಳಲ್ಲಿ ಈ ಆಚರಣೆ ಇನ್ನೂ ವಿಶೇಷವಾಗಿದೆ. ಒಂದು ವಾರದಿಂದಲೇ ಈ ಹಬ್ಬಕ್ಕೆ ಸಿದ್ದ ಮಾಡಿಕೊಂಡಿದ್ದು, ಪೂಜೆಯ ವಿಧಿವಿಧಾನ ಕೂಡ ಬೇರೆಯಾಗಿರುತ್ತದೆ. ಹಲವು ಕಡೆ ಭೂಮಿಯನ್ನು ಅಗೆದು ಎಡೆಯನ್ನು ಇಟ್ಟು, ಮುಚ್ಚಿ ಭೂ ಮಾತೆಗೆ ಉಣಬಡಿಸಿದ ತೃಪ್ತಿ ಪಡೆಯುತ್ತಾರೆ.

ರಾಜ್ಯದ ರೈತರ ಸಂಭ್ರಮ ಇಂದು ಕಂಡುಬಂದಿತ್ತು. ಎಲ್ಲಾ ತೋಟಗಳಲ್ಲಿ ಇಡೀ ಕುಟುಂಬ ಒಟ್ಟಾಗಿ ಭೂಮಿ ಪೂಜೆ ಮಾಡಿದ್ದು ವಿಶೇಷವಾಗಿತ್ತು. ಹೊಲ, ಗದ್ದೆಗಳಲ್ಲಿ ಮನೆಮಂದಿಯೆಲ್ಲ ಕುಳಿತು ಒಟ್ಟಿಗೆ ಊಟ ಮಾಡುವುದೇ ಒಂದು ಸಂತಸ. ಇಂತಹ ಸಂತಸದಲ್ಲಿ ರೈತರು ಪಾಲ್ಗೊಂಡಿದ್ದು ಕಂಡುಬಂತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...