alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯಾಲಿಟಿ ಶೋನಲ್ಲಿ ಅನುಚಿತ ವರ್ತನೆ, ನಟಿ ಆಕ್ರೋಶ

Bhavana_(kannada_Actress)

ಬೆಂಗಳೂರು: ಕಿರುತೆರೆ ವಾಹಿನಿಗಳಲ್ಲಿ ಇತ್ತೀಚೆಗೆ ರಿಯಾಲಿಟಿ ಶೋಗಳು ಹೆಚ್ಚಾಗಿದ್ದು, ಇಂತಹ ಶೋ ಒಂದರಲ್ಲಿ ನಟಿಯೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ನಟಿ ತಮಗಾದ ಅನ್ಯಾಯದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

 

ಖ್ಯಾತ ನಟಿ ಹಾಗೂ ಬಾಲಭವನದ ಅಧ್ಯಕ್ಷೆಯಾಗಿರುವ ಭಾವನಾ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದು, ಕಾರ್ಯಕ್ರಮದ ನಿರ್ದೇಶಕರು ಅನುಚಿತವಾಗಿ ವರ್ತಿಸಿದ್ದಲ್ಲದೇ, ಕ್ಷುಲ್ಲಕ ಕಾರಣ ನೀಡಿ ಅವರನ್ನು ಕೈಬಿಡಲಾಗಿದೆ. ಈ ಕುರಿತಂತೆ ಭಾವನಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಕಾರ್ಯಕ್ರಮದ ಗುಣಮಟ್ಟ ಮತ್ತು ತೀರ್ಪುಗಾರರನ್ನು ನಡೆಸಿಕೊಂಡ ರೀತಿ ಸರಿ ಇರಲಿಲ್ಲ ಎಂದು ದೂರಿದ್ದಾರೆ.

 

ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದ ನಿರ್ದೇಶಕರಿಗೆ ಸಮಯ ಪಾಲನೆ ಬಗ್ಗೆಯೇ ಗೊತ್ತಿಲ್ಲ. ಸೆಟ್ ಗೆ ತೀರ್ಪುಗಾರರನ್ನು ಕರೆಸಿ ಗಂಟೆಗಟ್ಟಲೆ ಕಾಯಿಸಲಾಗಿದೆ. ಅಲ್ಲದೇ, ನೃತ್ಯ ಮಾಡಲು ಬಂದ ಸ್ಪರ್ಧಿಗಳಿಗೆ ಅಪಾಯಕಾರಿ ಸ್ಟಂಟ್ ಮಾಡಲು ಪ್ರಚೋದನೆ ನೀಡಲಾಗಿದೆ. ಈ ಬಗ್ಗೆ ಆಕ್ಷೇಪಿಸಿದ್ದಕ್ಕೆ ತಮ್ಮನ್ನು ಕೈ ಬಿಡಲಾಗಿದೆ ಎಂದು ಆಕ್ರೋಶದಿಂದ ಹೇಳಿದ್ದು, ಕಾನೂನು ಹೋರಾಟ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...