alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯಿತಪ್ಪಿ ಪೆಟ್ರೋಲ್ ಬೆಲೆ ಏರಲೇಬೇಕು ಎಂದ ಕಾರ್ಯಕರ್ತನಿಗೆ ಕಪಾಳಮೋಕ್ಷ

ಬೆಳಗಾವಿ: ಪೆಟ್ರೋಲ್-ಡೀಸೆಲ್ ದರ ಏರಿಕೆ ಖಂಡಿಸಿ ನಡೆಸುತ್ತಿರುವ ಭಾರತ್ ಬಂದ್ ಕೆಲವೆಡೆ ಹಿಂಸಾಚಾರಕ್ಕೆ ತಿರುಗುತ್ತಿದ್ದು, ಪೆಟ್ರೋಲ್ ಬೆಲೆ ಏರಿಕೆಯಾಗಬೇಕೆಂದು ಕಾರ್ಯಕರ್ತನೊಬ್ಬ ಘೋಷಣೆ ಕೂಗಿದ್ದಕ್ಕೆ ಆಮ್ ಆದ್ಮಿ ಪಕ್ಷದ ಮುಖಂಡ, ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಭಾರತ್ ಬಂದ್ ಪ್ರತಿಭಟನೆ ರಾಜ್ಯಾದ್ಯಂತ ಭುಗಿಲೆದ್ದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪೆಟ್ರೋಲ್ ಬೆಲೆ ಇಳಿಯಲೇಬೇಕು ಎಂಬ ಬ್ಯಾನರ್ ಹಿಡಿದು ಸಾಗುತ್ತಿದ್ದ ವ್ಯಕ್ತಿ ಒಮ್ಮೆಲೆ ಬಾಯಿತಪ್ಪಿ ಪೆಟ್ರೋಲ್ ಬೆಲೆ ಏರಲೇಬೇಕು ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಆಪ್​ ಮುಖಂಡ ಸದಾನಂದ ಬಾಮನೆ, ಕಾರ್ಯಕರ್ತನಿಗೆ ರಸ್ತೆ ಮಧ್ಯೆಯೇ ಕಪಾಳಮೋಕ್ಷ ಮಾಡಿದ್ದಾರೆ.

ಬೆಳಗಾವಿಯ ಚೆನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಮುಖಂಡನ ವರ್ತನೆಗೆ ಬೇಸತ್ತ ಕಾರ್ಯಕರ್ತ, ಪ್ರತಿಭಟನೆ ಬಿಟ್ಟು ವಾಪಸ್ ತೆರಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...