alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆಗೂ ಬದುಕಿ ಬರಲಿಲ್ಲ ಕಂದಮ್ಮ

child bdvt

ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಿಂದ ಜನಿಸಿದ 12 ಗಂಟೆಯಲ್ಲೇ ಅಪಹರಣಕ್ಕೆ ಈಡಾಗಿದ್ದ ನವಜಾತ ಗಂಡು ಶಿಶು ಶವವಾಗಿ ಪತ್ತೆಯಾಗಿದೆ. ಮೇ 11ರಂದು ಅರಸೀಕೆರೆಯ ಅರುಣ್ ಕುಮಾರ್ ಮತ್ತು ಜೀವಿತಾ ದಂಪತಿಯ ಗಂಡು ಮಗುವನ್ನು ಅಪಹರಿಸಲಾಗಿತ್ತು.

ಮೇ 10 ರಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ಜೀವಿತಾ ಅವರಿಗೆ ಅದೇ ದಿನ ಸಂಜೆ 4.15 ಕ್ಕೆ ಹೆರಿಗೆಯಾಗಿದ್ದು, ಗಂಡು ಮಗು ಜನಿಸಿತ್ತು. ಮರುದಿನ ಬೆಳಗಿನ ಜಾವ 4 ರಿಂದ 5 ಗಂಟೆ ಸುಮಾರಿಗೆ ಮಹಿಳೆಯೊಬ್ಬಳು ಮಗುವನ್ನು ಅಪಹರಿಸಿದ್ದಳೆಂದು ಹೇಳಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶಂಕಿತರನ್ನೆಲ್ಲಾ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರಾದರೂ, ನವಜಾತ ಶಿಶುವಿನ ಸುಳಿವು ಪತ್ತೆಯಾಗಿರಲಿಲ್ಲ.

ಕೊನೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಮೇ 11 ರಂದು ಬೆಳಗಿನ ಜಾವ ನಾಪತ್ತೆಯಾಗಿದ್ದ ಮಗುವಿನ ಶವ ಮೇ 13 ರಾತ್ರಿ ಭದ್ರಾನದಿಯ ಹಳೆ ಸೇತುವೆ ಬಳಿ ಪತ್ತೆಯಾಗಿದೆ. ಮಗುವಿನ ಕುತ್ತಿಗೆ ಹಿಸುಕಿ ಕೊಲೆ ಮಾಡಿರಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...