alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಬಿರುಗಾಳಿ ಮಳೆಗೆ ಭದ್ರಾವತಿ ತತ್ತರ

img-20170411-wa0044

ಶಿವಮೊಗ್ಗ: ಭದ್ರಾವತಿಯಲ್ಲಿ ಮಂಗಳವಾರ ಸಂಜೆ ಭಾರೀ ಬಿರುಗಾಳಿ ಸಹಿತ ಸಿಡಿಲಬ್ಬರದ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಬಿದ್ದಿವೆ.

ಸುರಗಿತೋಪಿನಲ್ಲಿ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, ಛಾವಣಿಗೆ ಹಾನಿಯಾಗಿದೆ. ಕಾಗದ ನಗರದಲ್ಲಿ ಬಿರುಗಾಳಿಗೆ ಮನೆಯ ಛಾವಣಿಯೇ ಹಾರಿಹೋಗಿದೆ.

7 ನೇ ವಾರ್ಡ್ ನಲ್ಲಿ ಮರ ಬಿದ್ದು ಕಾರ್ ಜಖಂಗೊಂಡಿದೆ. ವಿ.ಐ.ಎಸ್.ಎಲ್. ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ಕೆಲಕಾಲ ಸಂಚಾರ ಬಂದ್ ಮಾಡಲಾಗಿತ್ತು.

ಡಿ.ಎ.ಆರ್. ಮೈದಾನದಲ್ಲಿ ಮರಗಳು ಬಿದ್ದಿವೆ. ಚೌಡೇಶ್ವರಿ ದೇವಾಲಯದ ಅರಳಿ ಮರ ಬಿದ್ದು, ವಿದ್ಯುತ್ ಲೈನ್ ಗೆ ಹಾನಿಯಾಗಿದೆ.

img-20170411-wa0033

ಜೆ.ಪಿ.ಎಸ್. ಕಾಲೋನಿಯಲ್ಲಿಯೂ ಮರಗಳು ಬಿದ್ದು ಹಾನಿಯಾಗಿದೆ. ಹೊಸಮನೆ, ಬೊಮ್ಮನಕಟ್ಟೆ, ಸುಣ್ಣದಹಳ್ಳಿ, ಬಾರಂದೂರು ಮೊದಲಾದ ಕಡೆಗಳಲ್ಲಿ ಮರಗಳು ಬಿದ್ದಿವೆ.

ಇದರಿಂದಾಗಿ ನಗರದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯವಾಗಿ ಸಂಚಾರಕ್ಕೂ ತೊಂದರೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...