alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಮನೂರು ಶಿವಶಂಕರಪ್ಪ ಒಡೆತನದ ಆಸ್ಪತ್ರೆಗೆ ನೋಟಿಸ್

ss-hospital

ಬೆಂಗಳೂರಿನಲ್ಲಿರುವ ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್ ಎಸ್ ಆಸ್ಪತ್ರೆಗೆ ನೋಟಿಸ್ ಜಾರಿಯಾಗಿದೆ. ಎಸ್ ಎಸ್ ಹಾಸ್ಪಿಟಲ್, ಐಡಿಯಲ್ ಹೋಮ್ಸ್ ಸೇರಿದಂತೆ ಒಟ್ಟು 40 ಮಂದಿಗೆ ನೋಟಿಸ್ ನೀಡಲಾಗಿದೆ.

ರಾಜರಾಜೇಶ್ವರಿ ನಗರದಲ್ಲಿ ಸರ್ಕಾರಿ ಜಾಗವನ್ನು ಕಬಳಿಕೆ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ಸ್ವಯಂಪ್ರೇರಿತವಾಗಿ ಭೂಮಿ ತೆರವು ಮಾಡುವಂತೆ ಜಿಲ್ಲಾಡಳಿತ ನೋಟೀಸ್ ನೀಡಿದೆ.

ಎಸ್ ಎಸ್ ಆಸ್ಪತ್ರೆ ಮತ್ತು ಉಳಿದ 40 ಪ್ರಾಪರ್ಟಿಗಳನ್ನು ತೆರವು ಮಾಡಲು ಬಿಬಿಎಂಪಿ ಮುಂದಾಗಿತ್ತು. ಹೈಕೋರ್ಟ್ ಇದಕ್ಕೆ ನಾಲ್ಕು ವಾರಗಳ ತಡೆ ನೀಡಿತ್ತು. ಇದೀಗ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದ್ದು, ತೆರವು ಕಾರ್ಯಕ್ಕೆ ಡಿಸೆಂಬರ್ 16ರವರೆಗೆ ಗಡುವು ನೀಡಿದೆ.

ತೆರವುಗೊಳಿಸದೇ ಇದ್ದಲ್ಲಿ ಅಧಿಕಾರಿಗಳು ಎಲ್ಲಾ ಕಟ್ಟಡಗಳನ್ನು ನೆಲಸಮ ಮಾಡಲಿದ್ದಾರೆ. ಮಳೆ ನೀರು ಮೋರಿಗಳಲ್ಲಿ ಕಟ್ಟಿಕೊಂಡು ಬೆಂಗಳೂರಲ್ಲಿ ಮಳೆಗಾಲದಲ್ಲಿ ಅನಾಹುತ ಸಂಭವಿಸುತ್ತಿರೋದ್ರಿಂದ ಬಿಬಿಎಂಪಿ ಕಳೆದ ಫೆಬ್ರವರಿಯಿಂದ್ಲೇ ಒತ್ತುವರಿ ವಿರುದ್ಧ ಸಮರ ಆರಂಭಿಸಿದೆ. ಎಲ್ಲೆಡೆ ಸರ್ವೇ ನಡೆಸಿ ಕಬಳಿಕೆಯಾಗಿರುವ ಜಾಗವನ್ನು ತೆರವು ಮಾಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...