alex Certify
ಕನ್ನಡ ದುನಿಯಾ       Mobile App
       

Kannada Duniya

60 ಕೋಟಿ ರೂಪಾಯಿಗೆ ಮಾರಾಟವಾಗಿದೆ ಬೆಂಗಳೂರಿನ ಈ ಐತಿಹಾಸಿಕ ಕಟ್ಟಡ

ಬೆಂಗಳೂರಿನ ಹೃದಯ ಭಾಗದಲ್ಲಿ ನಿವೇಶನ ಇದ್ದರೆ ಕೋಟಿ ರೂಪಾಯಿಗಳ ಒಡೆಯನಿದ್ದಂತೆ. ಹೌದು….ಸಿಲಿಕಾನ್ ಸಿಟಿಯಲ್ಲಿ ಭೂಮಿಗೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ ಇದೆ. ಬೆಂಗಳೂರಿನ ಐತಿಹಾಸಿಕ ಕಟ್ಟಡವೊಂದು ಬರೋಬ್ಬರಿ 60 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ನಗರದ ಮಧ್ಯ ಭಾಗದಲ್ಲಿರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿನ ಕಾವೇರಿ ಕಾಂಟಿನೆಂಟಲ್ ಕಟ್ಟಡ, 41 ಸಾವಿರ ಚದರಡಿ ವಿಸ್ತೀರ್ಣ ಹೊಂದಿದ್ದು, 60 ಕೋಟಿ ರೂ.ಗೆ ಮಾರಾಟವಾಗಿದೆ.

ಗ್ಲೋಬಲ್ ಟೆಕ್ನಾಲಜಿ ಸಂಸ್ಥೆಯ ಸತೀಶ್ ಚಂದ್ರ, ರಮೇಶ್ ಸುಂದರ್ ಮೂರ್ತಿರವರ ಕಟ್ಟಡವನ್ನು ಖರೀಸಿದ್ದಾರೆಂದು ಹೇಳಲಾಗಿದೆ.

1977ರಲ್ಲಿ ಆಗಿನ ಸಚಿವರಾಗಿದ್ದ ಸರೋಜಿನಿ ಮಹಿಷಿ ಕಟ್ಟಡವನ್ನು ಉದ್ಘಾಟಿಸಿದ್ದರು. ಸದ್ಯ ಬೆಂಗಳೂರಿನಲ್ಲಿ ಅತಿ ದುಬಾರಿ ಬೆಲೆಗೆ ಮಾರಾಟವಾದ ಕಟ್ಟಡ ಎಂಬ ಹೆಗ್ಗಳಿಕೆಯನ್ನು ಈ ಕಟ್ಟಡ ಹೊಂದಿದೆ. ಇದಕ್ಕೂ ಮೊದಲು ಯು.ಬಿ. ಸಿಟಿ ಮುಂದಿನ ಪ್ರದೇಶವನ್ನು 45 ಕೋಟಿ ರೂ ನೀಡಿ ಖರೀದಿಸಿದ್ದೇ ಅಧಿಕವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...