alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಬೆಂಗಳೂರಿಗರಿಗೆ ‘ಶಾಕ್’ ಆಗುವ ಸುದ್ದಿ…!

ರಾಷ್ಟ್ರರಾಜಧಾನಿ ದೆಹಲಿಯಂತೂ ವಾಯುಮಾಲಿನ್ಯದಿಂದ ತತ್ತರಿಸಿದೆ. ಕರ್ನಾಟಕದ ಸ್ಥಿತಿ ಕೂಡ ಭಿನ್ನವಾಗಿಲ್ಲ. ಮಾಲಿನ್ಯಕ್ಕೆ ಸಂಬಂಧಪಟ್ಟ ಖಾಯಿಲೆಗಳಿಂದ ರಾಜ್ಯದಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಶೇ.38 ಜನರು ಸಾವನ್ನಪ್ಪಿದ್ದಾರೆ ಅಂತಾ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

2016ರಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಶೇ.36.8 ಜನರು ಹೃದಯರಕ್ತನಾಳದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ದೀರ್ಘಕಾಲದ ಉಸಿರಾಟ ಖಾಯಿಲೆಗಳು ಎರಡನೇ ಅತಿದೊಡ್ಡ ಕಿಲ್ಲರ್ ಎನಿಸಿಕೊಂಡಿವೆ.

ಮಾಲಿನ್ಯದ ಮಟ್ಟ ಯಾವ ರೀತಿ ಇದೆ ಅನ್ನೋದನ್ನು ಪರೀಕ್ಷಿಸಿ, ಜಾಗ್ರತೆ ವಹಿಸಲೆಂದೇ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪೊಲ್ಯುಶನ್ ಮಾನಿಟರಿಂಗ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ. ಈ ರೀತಿ ಬೆಂಗಳೂರಲ್ಲಿ ಮಾಲಿನ್ಯ ಹೆಚ್ಚಲು ಕಾರಣ ಧೂಳು.

ಧೂಳು ಹೊಸದಾಗಿ ಹುಟ್ಟಿಕೊಂಡಿರೋ ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ ವೈದ್ಯರು. ಇದರಿಂದ ಶ್ವಾಸಕೋಶ ಸಮಸ್ಯೆ, ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆಗಳು, ಕ್ಯಾನ್ಸರ್ ಮತ್ತು ಡಯಾಬಿಟಿಸ್ ನಂತಹ ಮಾರಕ ಖಾಯಿಲೆಗಳು ಕೂಡ ಹೆಚ್ಚಾಗುತ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...