alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮನೆಯಲ್ಲಿ ಆಹಾರ ಉಳಿದಿದೆಯಾ ಹಾಗಿದ್ರೆ ಹೀಗೆ ಮಾಡಿ…!

ಭಾರತದಲ್ಲಿ ಅದೆಷ್ಟೋ ಜನ ತುತ್ತು ಅನ್ನಕ್ಕಾಗಿ, ತುಂಡು ಬಟ್ಟೆಗಾಗಿ ಈಗಲೂ ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸದ್ಯ ಸಮುದಾಯ ಫ್ರಿಡ್ಜ್ ಎಲ್ಲರ ಗಮನ ಸೆಳೆದಿದೆ. ಈ ಫ್ರಿಡ್ಜ್ ನಲ್ಲಿ ತಿನ್ನಲು ಯೋಗ್ಯವಾದ ಆಹಾರವನ್ನು ಇಟ್ಟರೆ, ಹಸಿದ ಹೊಟ್ಟೆ ತುಂಬುತ್ತದೆ.

ಬಿಟಿಎಂ ಲೇಔಟ್, ಇಂದಿರಾನಗರ, ಕೋರಮಂಗಲ ಹಾಗೂ ಬೆನ್ಸನ್ ಟೌನ್ ಗಳಲ್ಲಿ ಪಬ್ಲಿಕ್ ಫ್ರಿಡ್ಜ್ ಆರಂಭವಾಗಿದೆ. ಈ ಫ್ರಿಡ್ಜ್ ಗಳಲ್ಲಿ ಇಟ್ಟ ಆಹಾರದಿಂದ ದಿನಂಪ್ರತಿ 400 ಮಂದಿ ಊಟ ಮಾಡ್ತಾರೆ ಎಂದು ತಿಳಿದು ಬಂದಿದೆ.

ಪಬ್ಲಿಕ್ ಫೌಂಡೇಶನ್ ಕಳೆದ ನವೆಂಬರ್ ನಲ್ಲಿ ಮೊದಲು ಬಿಟಿಎಂ ಲೇಔಟ್ ನಲ್ಲಿ ಇದರ ಪ್ರಯೋಗವನ್ನು ಮಾಡಿತು. ಇದರಿಂದ ದಿನಂಪ್ರತಿ ಸುಮಾರು 70 ರಿಂದ 100 ಜನರ ಹಸಿವು ನೀಗಿಸುವ ಕಾರ್ಯ ಆಯಿತು. ಇದ್ರಿಂದ ಪ್ರೇರಣೆಗೊಂಡ ಫೌಂಡೇಶನ್, ಬೆಂಗಳೂರಿನ ಹಲವೆಡೆ ಇಂತಹ ಫ್ರಿಡ್ಜ್ ಇಡುವ ಯೋಚನೆಯನ್ನು ಮಾಡಿತು.

ಪಬ್ಲಿಕ್ ಫ್ರಿಡ್ಜ್ ಮುಂಜಾನೆ 7 ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತದೆ. ನಿಮ್ಮ ಮನೆಯಲ್ಲಿ, ಸಮಾರಂಭಗಳಲ್ಲಿ ಮಿಕ್ಕ ಆಹಾರವನ್ನು ಸರಿಯಾಗಿ ಪ್ಯಾಕ್ ಮಾಡಿ, ಈ ಫ್ರಿಡ್ಜ್ ನಲ್ಲಿ ಇಟ್ಟರೆ ಮುಗೀತು. ಹಸಿದವರ ಹೊಟ್ಟೆಗೆ ನಿಮ್ಮ ಆಹಾರ ಸೇರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...